Slide
Slide
Slide
previous arrow
next arrow

ಕಾಳಿ ಸಂಗಮದಲ್ಲಿ ಸೂರ್ಯ ಗ್ರಹಣ ಕಣ್ತುಂಬಿಕೊಂಡ ಜನತೆ

300x250 AD

ಕಾರವಾರ: ಭಾರತದಲ್ಲಿ ಕಾಣಿಸಲ್ಪಟ್ಟ ಭಾಗಶಃ ಸೂರ್ಯಗ್ರಹಣವನ್ನ ಕಾರವಾರದಲ್ಲೂ ವೀಕ್ಷಣೆ ಮಾಡಲಾಗಿದೆ. ನಗರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕಾಳಿ ಸೇತುವೆ ಬಳಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ನೂರಾರು ಜನ ಇಲ್ಲಿ ಗ್ರಹಣ ವೀಕ್ಷಣೆ ಮಾಡಿದರು.
ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಸೂರ್ಯಗ್ರಹಣ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಕಪ್ಪು ಕನ್ನಡಕವನ್ನ ವಿತರಿಸಲಾಗಿತ್ತು. ಅಲ್ಲದೇ ಟೆಲಿಸ್ಕೋಪ್ ಮೂಲಕವೂ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಖಗೋಳ ಅಧ್ಯಯನ ಸಂಸ್ಥೆ ಆಗಸ್ 360ಯ ಸ್ಥಾಪಕ ಶಿರಸಿಯ ವಸಂತ ಹೆಗಡೆ ಭೈರುಂಬೆ ಅವರು ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಿಗೆ ಸೂರ್ಯ ಗ್ರಹಣದ ಕುರಿತು ಮಾಹಿತಿ ನೀಡಿದರು. ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಡಾ.ಸಂಜೀವ ದೇಶಪಾಂಡೆ, ಶಿಕ್ಷಣ ಸಂಯೋಜಕಿ ಕವಿತಾ ಬಾಡಕರ್ ಸೇರಿದಂತೆ ಇತರ ಸಿಬ್ಬಂದಿ ಕೂಡ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಯ ವಿಧಾನ ವಿವರಿಸಿಕೊಟ್ಟರು. ಬರಿ ಗಣ್ಣಿನಲ್ಲಿ ವೀಕ್ಷಣೆ ಮಾಡದಂತೆ ತಿಳಿಹೇಳಿದರು. ಗ್ರಹಣದ ಫಲಿತಾಂಶವನ್ನ ದಾಖಲಿಸಿಕೊಂಡರು.
ನಗರದಲ್ಲಿ ಶೇಕಡಾ 15ರಷ್ಟು ಮಾತ್ರ ಗ್ರಹಣ ಗೋಚರವಾಗಿದ್ದು, ಕಾಳಿ- ಅರಬ್ಬಿ ಸಂಗಮದಲ್ಲಿ ಅದು ಅತಿ ಸುಂದರವಾಗಿ ಗೋಚರಿಸಿತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಸೇರಿದಂತೆ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಕುತೂಹಲದಿಂದ ಗ್ರಹಣ ವೀಕ್ಷಿಸಿದರು.
ಇದು ಈ ವರ್ಷದ ಎರಡನೇ ಸೂರ್ಯಗ್ರಹಣ ಇದಾಗಿದೆ. ಆದರೆ ಮೊದಲ ಬಾರಿ ಆಗಿದ್ದ ಸೂರ್ಯ ಗ್ರಹಣ ಭಾರತದಲ್ಲಿ ಕಂಡಿರಲಿಲ್ಲ. ಇಂದು ಸಂಭವಿಸಿದ ಗ್ರಹಣ ಭಾಗಶಃ ಗೋಚರವಾಗಿದೆ ಎಂದು ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಂಯೋಜಕಿ ಕವಿತಾ ಬಾಡಕರ್ ಹೇಳಿದರು .

300x250 AD
Share This
300x250 AD
300x250 AD
300x250 AD
Back to top