ಶಿರಸಿ:ತಾಲೂಕಿನ ಬಾಳಗಾರಿನ ಜೋಗಿಮನೆಯಲ್ಲಿ ಅ 29ರಂದು ಸಂಜೆ 4 ಗಂಟೆಗೆ ಯಕ್ಷಪಂಚಕ ಸಮಾರೋಪ ಹಾಗೂ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಲೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೋಗಿಮನೆ ಬಳಗವು ಕಾನಸೂರಿನ ಸೇವಾರತ್ನ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯ ರಾಜ್ಯಾಧ್ಯಕ್ಷರಾದ ಡಾ.ಜಿ.ಎಲ್.ಹೆಗಡೆ ಅವರು ಉದ್ಘಾಟಿಸುವರು. ಭಾರತ ಸರ್ಕಾರದ ಕಂಪನಿ ಸೆಕ್ರೆಟರಿ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿ.ಎಸ್.ನಾಗೇಂದ್ರ ಡಿ.ರಾವ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ರಾಜ್ಯ ಇತಿಹಾಸ ಪಠ್ಯಕ್ರಮ ಸಮಿತಿಯ ಸದಸ್ಯರೂ, ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜ್ಯ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರೂ ಆದ ಡಾ.ಬಾಲಕೃಷ್ಣ ಹೆಗಡೆ, ಬೆಂಗಳೂರಿನ ಡೆಸಾಲ್ಟ್ ಸಿಸ್ಟೆಮ್ಸ್ನ ಸೀನಿಯರ್ ಐಟಿ ಎಡ್ಮಿನಿಸ್ಟೇಟರ್ ಮೈತ್ರೇಯ ಅನಂತ ಹೆಗಡೆ, ಸೇವಾರತ್ನ ಮಾಹಿತಿ ಕೇಂದ್ರದ ಅಧ್ಯಕ್ಷರಾದ ರತ್ನಾಕರ ಭಟ್ ಉಪಸ್ಥಿತರಿರುವರು. ಜೋಗಿಮನೆ ಬಳಗದ ಅಧ್ಯಕ್ಷರಾದ ಅನಂತ ರಾಮಕೃಷ್ಣ ಹೆಗಡೆ, ಜೋಗಿಮನೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಿರಿಯ ಸಾಧಕರಿಗೆ ಸನ್ಮಾನ: ಅತ್ಯಂತ ಕಿರಿ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಗೈಯುತ್ತಿರುವ ಬೆಟ್ಟಕೊಪ್ಪದ ಕು.ತುಳಸಿ ಹೆಗಡೆ , ಮತ್ತು ಎನ್.ಎಸ್.ಎಸ್.ನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಯುವ ಯೋಧ ಪ್ರಶಸ್ತಿ ಹಾಗೂ ಎನ್.ಎಸ್.ಎಸ್. ಗಣರಾಜ್ಯೋತ್ಸವ ಪಥ ಸಂಚಲನದ ರಾಜ್ಯ ಮಟ್ಟದ ಪೂರ್ವಭಾವಿ ಆಯ್ಕೆ ಶಿಬಿರದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಕಮಲಾ ನೆಹರು ಮಹಿಳಾ ಕಾಲೇಜು ಮತಸ್ತು ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿ ಕು.ನಾಗವೇಣಿ ಎನ್. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಭಾಗವತರು: ಶ್ರೀನಿವಾಸ ಭಾಗವತ ಮತ್ತಿಘಟ್ಟ, ಎಂ.ಪಿ.ಹೆಗಡೆ, ಉಳ್ಳಾಲಗದ್ದೆ, ಮೃದಂಗ: ಶ್ರೀಪತಿ ಹೆಗಡೆ ಕಂಚಿಮನೆ, ಚಂಡೆ: ಗಂಗಾಧರ ಹೆಗಡೆ ಕಂಚಿಮನೆ, ಅರ್ಥಧಾರಿಗಳು: ಡಾ.ಜಿ.ಎಲ್.ಹೆಗಡೆ, ಕುಮಟಾ, ಆರ್.ಟಿ.ಭಟ್ ಕಬಗಾಲ್, ಸುಬ್ರಾಯ ಹೆಗಡೆ ಕೆರೆಕೊಪ್ಪ, ರತ್ನಾಕರ ಭಟ್ ಕಾನಸೂರು, ವಿ.ರಾಮಚಂದ್ರ ಭಟ್, ಶಿರಳಗಿ, ಶ್ರೀಮತಿ ಭವಾನಿ ಭಟ್, ಶಿರಸಿ, ಶ್ರೀಮತಿ ರೋಹಿಣಿ ಹೆಗಡೆ, ಅಮಚಿಮನೆ ಮತ್ತು ಕು.ಆನಂದ ಶೀಗೇಹಳ್ಳಿ. ಭಾಗವಹಿಸಲಿದ್ದಾರೆ.