Slide
Slide
Slide
previous arrow
next arrow

ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ ಪ್ರತಿಮೆಗಳು

300x250 AD

ಬೆಂಗಳೂರು: ನಾವು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರತಿಮೆಗಳನ್ನು ನೋಡಿ ಅಬ್ಬಾ ಎಂದು ಬೆರಗಾಗುತ್ತಿದ್ದೆವು ಉದಾಹರಣೆಗೆ ಅಮೆರಿಕಾದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ. ಅಂತಹ ಪ್ರತಿಮೆಗಳನ್ನು ನೋಡಿ ನಮ್ಮ ದೇಶದಲ್ಲೂ ಇರಬಾರದಿತ್ತ ಎಂದುಕೊಳ್ಳುತ್ತಿದ್ದೆವು 2014 ರ ನಂತರದಲ್ಲಿ ಮೋದಿಜಿ ಪ್ರಧಾನಿಯಾದ ಮೇಲೆ ನಮ್ಮ ದೇಶದಲ್ಲೂ ಅದು ಸಾಧ್ಯವಾಗಿದ್ದು ಸಂತಸದ ವಿಷಯವೇ ಸರಿ.!

ಗುಜರಾತ್ ನಲ್ಲಿ ಸರ್ದಾರ್ ಪಟೇಲರ ಏಕತಾ ಪ್ರತಿಮೆ: 2018 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ದೇಶಕ್ಕರ್ಪಿಸಿದರು. ಗುಜರಾತ್ ನ ಕೇವಡಿಯಾ ದಲ್ಲಿರುವ ಸರ್ದಾರ್ ಪಟೇಲರ ಪ್ರತಿಮೆ ಪ್ರಪಂಚದ ಅತ್ಯಂತ ದೊಡ್ಡ ಪ್ರತಿಮೆಯಾಗಿದ್ದು ಸುಮಾರು 182 ಮೀಟರ್ ಉದ್ದವಿದೆ. ಸರ್ದಾರ್ ಪಟೇಲರ ನೇತೃತ್ವದಲ್ಲಿ ಭಾರತದಲ್ಲಿದ್ದ ಸುಮಾರು 562 ರಾಜಾಡಳಿತ ಪ್ರದೇಶಗಳನ್ನು ಒಟ್ಟು ಮಾಡಿದ್ದರು ಅವರ ನೆನಪಿಗಾಗಿ ಈ ಉಕ್ಕಿನ ಪ್ರತಿಮೆ ಭಾರತ ಸರ್ಕಾರ ನಿರ್ಮಾಣ ಮಾಡಿತು. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

ತೆಲಂಗಾಣದಲ್ಲಿ ‘ಸಮಾನತೆಯ ಪ್ರತಿಮೆ: ಜಗತ್ತಿನ ಎರಡನೇ ಅತಿ ದೊಡ್ಡ ಪ್ರತಿಮೆಯಾದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ 2022 ಫೆಬ್ರವರಿಯಂದು ರಾಮಾನುಜರ ಜನ್ಮದಿನದಂದು ಉದ್ಘಾಟಿಸಿದರು.
ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯ ಅವರ 216 ಅಡಿ ಎತ್ತರದ ಪ್ರತಿಮೆಯನ್ನು ‘ಪಂಚಲೋಹ’ದಿಂದ ಮಾಡಲಾಗಿದೆ. ಅಂದರೆ, ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಹಾಗೂ ಸತುವಿನಿಂದ ಮಾಡಲಾಗಿದೆ. ಇದು ಜಗತ್ತಿನಲ್ಲಿ ಕುಳಿತ ಸ್ಥಿತಿಯಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.

300x250 AD

ಕರ್ನಾಟಕದಲ್ಲಿ ಕೆಂಪೇಗೌಡರ ಪ್ರಗತಿಯ ಪ್ರತಿಮೆ: ಬೆಂಗಳೂರು ಎಂದು ಹೆಸರು ಕೇಳಿದರೆ ಇಡೀ ಪ್ರಪಂಚವೇ ಒಮ್ಮೆ ತಿರುಗಿ ನೋಡುತ್ತದೆ, ಪ್ರಪಂಚಕ್ಕೆ ಸಾಕಷ್ಟು ಕೊಡುಗೆಗಳನ್ನು ಬೆಂಗಳೂರು ನೀಡುತ್ತಿದೆ. ಇಂತಹಾ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು, ಬೆಂಗಳೂರಿನಲ್ಲಿ ವಿವಿಧ ದಿಕ್ಕಿನಲ್ಲಿ ಮಹಾಧ್ವಾರಗಳನ್ನು ನಿರ್ಮಿಸಿದರು. ನಗರದ ಹಲವೆಡೆ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಹಲವು ಪ್ರದೇಶಗಳಲ್ಲಿ ದೇವಸ್ಥಾನಗಳನ್ನು ಕಟ್ಟಿದರು. ವಿವಿಧ ಸಮುದಾಯಗಳ ಕಸುಬುಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣ ನಿರ್ಮಿಸಿದರು. ಅದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು.
ಬೆಂಗಳೂರಿಗೆ ನದಿ ಮೂಲಗಳಿರಲಿಲ್ಲ. ಹೀಗಾಗಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು.ಹೊಸ ತಂತ್ರಜಾನವನ್ನು 500 ವರ್ಷಗಳ ಹಿಂದೆ ಬಳಕೆ ಮಾಡಿರುವಂತ ಖ್ಯಾತಿ ಬೆಂಗಳೂರಿಗೆ ಇದ್ದರೆ, ಆ ಶ್ರೇಯಸ್ಸು ಕೆಂಪೇಗೌಡರಿಗೆ ಸೇರಬೇಕು. ಇಂತಹ ಒಂದು ಸುಂದರವಾದ ಬೆಂಗಳೂರನ್ನು ಕಟ್ಟಿದ್ದರಿಂದ ಇದರ ಒಟ್ಟು ಪರಿಣಾಮ ಇಡೀ ಕನ್ನಡ ನಾಡಿನ ಮೇಲೆ ಆಗಿದೆ. ಇಡೀ ಕನ್ನಡ ನಾಡಿನ ಜನತೆಯ ಬದುಕಿನ ಮೇಲೆ ಆಗಿದೆ. ಕನ್ನಡ ನಾಡಿನಲ್ಲಾಗುತ್ತಿರುವ ಪ್ರಗತಿಯಲ್ಲಾಗಿದೆ. ಒಬ್ಬ ಮುತ್ಸದಿ ರಾಜ ಯಾವ ರೀತಿ ಎಲ್ಲರ ಮೇಲೆ ಪ್ರಭಾವ ಬೀರಬಲ್ಲ ಮತ್ತು ಕಾಲ ಗಡಿ ಮೀರಿ ಜನರ ಮನಸ್ಸಿನಲ್ಲಿ ಉಳಿಯಬಲ್ಲ ಎಂಬುದನ್ನು ಕೆಂಪೇಗೌಡರ ಬದುಕಿನಿಂದ ನಾವು ನೋಡುತ್ತಿದ್ದೇವೆ.
ಕೆಂಪೇಗೌಡರ ವಿವೇಚನಾಯುತ ಯೋಜನೆಗೆ ಮತ್ತು ಕತೃತ್ವಶಕ್ತಿಯುಳ್ಳ ವ್ಯಕ್ತಿತ್ವಕ್ಕೆ 481 ವರ್ಷಗಳ ಬಳಿಕವೂ ಜನತೆ ಋುಣಪೂರ್ವಕವಾಗಿ ನೆನೆಯುತ್ತಲೇ ಇದ್ದಾರೆ. ನಗರದ ಹೊರವಲಯದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತಿ ದೊಡ್ಡ ಬಸ್‌ ನಿಲ್ದಾಣ, ಮೆಟ್ರೊ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ. ಅಲ್ಲದೇ ಇದೀಗ ಬೆಂಗಳೂರು ವಿಮಾನ ನಿಲ್ದಾಣದ ಬಳಿಯಲ್ಲಿ ಅವರ ಪ್ರತಿಮೆ ಅನಾವರಣಗೊಳ್ಳಲು ಸಜ್ಜಾಗಿದೆ. 90 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯು 18 ಅಡಿ ಎತ್ತರದ ಕಾಂಕ್ರೀಟ್ ಪೀಠದ ಮೇಲೆ ಸ್ಥಾಪಿಸಲಾಗಿದೆ, ರಾಮ್ ಸುತಾರ್ ಆರ್ಟ್ಸ್ ಕ್ರಿಯೇಷನ್ಸ್ ಕಲಾವಿದರು ಇದನ್ನು ಸಿದ್ಧಪಡಿಸಿದ್ದಾರೆ. ಪ್ರತಿಮೆಯು 100 ಟನ್ ಕಂಚಿನಿಂದ ನಿರ್ಮಾಣಗೊಂಡಿದ್ದು, 120 ಟನ್ ಉಕ್ಕು ಬಳಸಲಾಗಿದೆ. ಪೀಠದ ನಾಲ್ಕು ದಿಕ್ಕಿನಲ್ಲೂ ಸಹ ಕೆಂಪೇಗೌಡರ ಇತಿಹಾಸದ ಬರಹಗಳಿವೆ. ಆಕ್ಟೊಬರ್ 21 ಶುಕ್ರವಾರದಂದು ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು, ನಾಡಿನಾದ್ಯಂತ ಶುಕ್ರವಾರದಿಂದ ನವೆಂಬರ್ 7 ರವರೆಗೆ ರಾಜ್ಯದ ವಿವಿಧ ಕಡೆ ಪವಿತ್ರ, ಚಾರಿತ್ರಿಕ ಸ್ಥಳಗಳಿಂದ ಮಣ್ಣು ಸಂಗ್ರಹಿಸಿ, ಕೆಂಪೇಗೌಡರ ಪ್ರತಿಮೆಯ ತಳಹದಿಯಲ್ಲಿ ಅದನ್ನು ಲೀನ ಮಾಡಬೇಕು ಎನ್ನುವ ಮಹತ್ವಕಾಂಕ್ಷೆಯ ‘ಬನ್ನಿ ನಾಡ ಕಟ್ಟೋಣ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಡಾ.ಅಶ್ವಥ್ ನಾರಾಯಣ್ ಅವರು ವಿಶೇಷವಾಗಿ ಪ್ರತಿಮೆ ನಿರ್ಮಾಣದಲ್ಲಿ ಆಸಕ್ತಿ ವಹಿಸಿ ಪ್ರತಿಯೊಂದು ಹಂತದಲ್ಲೂ ಮಾಹಿತಿ ಪಡೆದು ಪ್ರತಿಮೆ ನಿರ್ಮಾಣಕ್ಕೆ ಅವರದೇ ಆದ ಕೊಡುಗೆಯನ್ನು ನೀದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 11 ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಥೀಮ್‍ ಪಾರ್ಕ್‍ನಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.

Share This
300x250 AD
300x250 AD
300x250 AD
Back to top