Slide
Slide
Slide
previous arrow
next arrow

ಪರೇಶ್ ಮೇಸ್ತಾನ ಸಾವಿನ ಪ್ರಕರಣದ ಪುನರ್ ತನಿಖೆಯ ಮನವಿ ಬಿಜೆಪಿಯವರ ಹುನ್ನಾರ :ರಾಜು ಉಗ್ರಾಣಕರ್

300x250 AD

ಶಿರಸಿ: ಮೃತ ಪರೇಶ್ ಮೇಸ್ತಾನ ತಂದೆ ಕಮಲಾಕರ ಮೇಸ್ತ ಅವರು ಮುಖ್ಯಮಂತ್ರಿಗಳಿಗೆ ತಮ್ಮ ಮಗನ ಪ್ರಕರಣವನ್ನ ಪುನರ್ ತನಿಖೆಗೆ ಆಗ್ರಹಿಸಿ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ ಸಂದೇಹಗಳು ಅವರ ಸಂದೇಹಗಳಲ್ಲವೇ ಅಲ್ಲ. ಬರುವ ಚುನಾವಣೆಯವರೆಗೆ ಪರೇಶ್ ಹೆಸರನ್ನು ಜೀವಂತವಾಗಿಡಲು ಬಿಜೆಪಿಯವರ ಹುನ್ನಾರವೇ ಹೊರತು ಸತ್ಯವಲ್ಲ ಎಂದು ಕೆಪಿಸಿಸಿ ಮೀನುಗಾರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ್ ಹೇಳಿದ್ದಾರೆ.

ರಾಜಕಾರಣ ಏನೇ ಇದ್ದರು, ಪುತ್ರ ಶೋಕದ ಅರಿವು ಸಿದ್ದರಾಮಯ್ಯ ಅವರಿಗೂ ಇದೆ. ಅವರು ಸಾಕ್ಷ್ಯ ನಾಶ ಮಾಡಿದ್ದಾರೆ ಎನ್ನುವ ಕಮಲಾಕರ ಅವರ ಹೇಳಿಕೆ ಬಿಜೆಪಿಯವರ ಕಲ್ಪಿತ ಹೇಳಿಕೆ. ಅವಕಾಶವಾದಿ ರಾಜಕಾರಣ ಬಿಜೆಪಿಯವರ ಗುಣ. ಇಲ್ಲಿಯವರೆಗೆ ಡಾ.ಚಿತ್ತರಂಜನ್ ಅವರ ಹತ್ಯೆ, ತಿಮ್ಮಪ್ಪ ನಾಯ್ಕ ಹತ್ಯೆಯನ್ನು ಯಾಕೆ ಸಿಬಿಐ ತನಿಖೆಗೆ ಒತ್ತು ನೀಡಿ ಹೊರ ತರುತ್ತಿಲ್ಲ? ಅವರು ಈಗ ಚಲಾವಣೆಯಲ್ಲಿಲ್ಲದ ನಾಣ್ಯ. ಅವರಿಂದ ಬಿಜೆಪಿಗೆ ರಾಜಕೀಯವಾಗಿ ಯಾವುದೇ ಲಾಭವಿಲ್ಲ. ಅಂತಹ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಲಾಲ್‌ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಅವರನ್ನೇ ಮೂಲೆಗುಂಪು ಮಾಡಿರುವ ಇವರಿಗೆ ಚಿತ್ತರಂಜನ್, ತಿಮ್ಮಪ್ಪ ನಾಯ್ಕ ಅವರೆಲ್ಲ ಯಾವ ಲೆಕ್ಕ? ಈ ಜಿಲ್ಲೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವಕ್ಕೆ ಕಾರಣವಾದ ಪರೇಶ್ ಮೇಸ್ತ ಹೆಸರು ಬರುವ ಚುನಾವಣೆಯವರೆಗೆ ಕಾಯ್ದುಕೊಳ್ಳಲೆ ಬೇಕು. ಮೋದಿಯ ಮಾತಿನ ಮೋಡಿ ದಿನದಿಂದ ದಿನಕ್ಕೆ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಹೆಚ್ಚಿದ ಲಂಚ, ಹಿಡಿತ ಕಳೆದುಕೊಂಡ ಇಲಾಖೆಗಳು, ಅಭಿವೃದ್ಧಿಯ ಚಿಂತನೆ ಮರೆತ ಸರಕಾರದ ಪ್ರತಿನಿಧಿಗಳು, ಶತಾಯ ಗತಾಯ ಮತ್ತೊಮ್ಮೆ ಆಯ್ಕೆ ಆಗಬೇಕಾದರೆ ಅವರಿಗೆ ಮತ್ತಾವ ಅಂಶಗಳು ಇಲ್ಲ ಎಂದಿದ್ದಾರೆ.

300x250 AD

ವಿರೋಧ ಪಕ್ಷದ ಮೇಲೆ ಮಾಡುವ ಹುರುಳಿಲ್ಲದ ಆಪಾದನೆ, ಧರ್ಮ ಆಧಾರಿತ ಪ್ರಣಾಳಿಕೆ ಮಾತ್ರ ನಮ್ಮ ಉಳಿಸಲು ಸಾಧ್ಯ ಎನ್ನುವದನ್ನು ಅರಿತಿದ್ದಾರೆ. ಸುಳ್ಳಿನ ಭರವಸೆಯಿಂದ ಜನರನ್ನು ಪುನಃ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎನ್ನುವದನ್ನು ಮನಗಂಡಿದ್ದಾರೆ. ಕಮಲಾಕರ ಮೇಸ್ತ ಪುತ್ರ ಶೋಕದಿಂದ ಮನ ನೊಂದಿದ್ದಾರೆ. ಹಿಂದೊಮ್ಮೆ ಬಿಜೆಪಿಯವರ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಮಗನನ್ನು ಕಳೆದುಕೊಂಡ ಕಮಲಾಕರ ಮೇಸ್ತ ಬಿಜೆಪಿಯವರ ಕುಮ್ಮುಕ್ಕಿನಿಂದ ಮತ್ತೊಮ್ಮೆ ಭ್ರಮನಿರಸನಕ್ಕೆ ಒಳಗಾಗದಿರಲಿ. ಅವರು ಮತ್ತೊಮ್ಮೆ ಬೇಕಾದರೆ ಅವರ ಮನಸ್ಸಿನ ಸಮಾಧಾನಕ್ಕೆ ಮರಣೋತ್ತರ ಪರೀಕ್ಷೆಗೆ ಪ್ರಯತ್ನಿಸಲಿ. ಹೊರತಾಗಿ ಅಂದಿನ ಕಾಂಗ್ರೆಸ್ ಪಕ್ಷ ಮಾಡಿದೆ ಎನ್ನುವ ಆರೋಪ ಸರಿಯಲ್ಲ. ಅಂದು ನಿಮ್ಮೊಡನೆ ನಿಂತ ಎಲ್ಲರೊಡನೆ ಚರ್ಚಿಸಿ. ಅಂದು ಪ್ರಚೋದನೆಗೆ ಒಳಗಾದ ಅದೆಷ್ಟೋ ಜನರಿಗೆ ಈಗ ಬಿಜೆಪಿಯ ಅಸಲಿಯತ್ ತಿಳಿದಿದೆ. ಕಮಲಾಕರ ಮೇಸ್ತ ಮತ್ತೊಮ್ಮೆ ಮರುಳಾಗದಿರಲಿ. ಬಿಜೆಪಿಯವರ ಕುತಂತ್ರಕ್ಕೆ ಬಲಿಯಾಗದಿರಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top