ಮುಂಡಗೋಡ: ತಾಲೂಕಿನ ನಾಗನೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಬುಧವಾರ ನಡೆಯಿತು. ನಾಗನೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುನೀಲ್ ಸಳಕೆ ಆಯ್ಕೆಯಾದರು.
ನಾಗನೂರ ಗ್ರಾಮ ಪಂಚಾಯತ್ ವ್ಯಾಪ್ತಿ ಒಟ್ಟು 14 ಸದಸ್ಯರು ಹೊಂದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನದ ಕಣದಲ್ಲಿದ್ದರು. ಅದರಲ್ಲಿ ಕಾಂಗ್ರೆಸ್ 7, ಬಿಜೆಪಿ 7 ಮತ ಪಡೆದು ಎರಡು ಪಕ್ಷಕ್ಕೆ ಸಮಬಲ ಮತ ಪಡೆದಿದ್ದು, ಅದಕ್ಕೆ ಚೀಟಿಯನ್ನು ಆರಿಸುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನೀಲ್ ಸಳಕೆ ಅಧ್ಯಕ್ಷರಾಗಿ ಆಯ್ಕೆಯಾದರು.
ಗ್ರಾಮ ಪಂಚಾಯತ್ ಮುಂದೆ ಕಾಂಗ್ರೆಸ್ ಅಭ್ಯರ್ಥಿಗೆ 1.50 ಲಕ್ಷ ಪಡೆದು ಸದಸ್ಯನೋರ್ವ ಮತ ಯಾಚಿದ್ದಾರೆ ಎಂದು ಬಿಜೆಪಿ ಸದಸ್ಯ ಟೀಕಿಸಿದ್ದರು. ಆಗ ಕಾಂಗ್ರೆಸ್ ಸದಸ್ಯನೋರ್ವ ಹಣ ಯಾರು ತೆಗೆದುಕೊಂಡಿದ್ದಾರೆ ಎಂದು ತೋರಿಸಿಕೊಡಬೇಕು ಎಂದು ಕೆಲ ಸಮಯ ಗೊಂದಲ ಸೃಷ್ಟಿಯಾಯಿತು.
ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ಕಾರ್ಯನಿರ್ವಹಿಸಿದರು. ಈ ಸದರ್ಭದಲ್ಲಿ ತೀರುಪತಿ ಭೋವಿವಡ್ಡರ, ಯಲ್ಲಪ್ಪ ಭೋವಿವಡ್ಡರ ಹಾಗೂ ಬಿಜೆಪಿ ಬೆಂಬಲಿತರು ಇದ್ದರು.