ದಾಂಡೇಲಿ: ಕಳೆದ ಏಳೆಂಟು ತಿಂಗಳುಗಳಿಂದ ಉತ್ಪಾದನಾ ಚಟುವಟಿಕೆಯನ್ನು ಸ್ಥಗಿತಗೊಳಿದ್ದ ತಾಲೂಕಿನ ಕೇರವಾಡದಲ್ಲಿರುವ ಶ್ರೇಯಸ್- ಶ್ರೀನಿಧಿ ಕಾರ್ಖಾನೆಯನ್ನು ಮಾರಾಟ ಮಾಡಲು ಕಾರ್ಖಾನೆಯ ಮಾಲೀಕ ಟಿ.ಎಸ್.ಸೋರಗಾವಿಯವರು ಯಲ್ಲಾಪುರದಲ್ಲಿ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆದ ಚರ್ಚೆಗಳು ಮತ್ತು ಬೆಳವಣಿಗೆಗಳನ್ನು ಟಿ.ಎಸ್.ಸೋರಗಾವಿಯವರು ಪತ್ರಕರ್ತರಿಗೆ ವಿವರಿಸಿದರು. ಸಚಿವರ ಮುಂದೆ ಕಾರ್ಖಾನೆಯ ಮಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು, ಕಾರ್ಮಿಕ ಮುಖಂಡರುಗಳಾದ ಸಿ.ವಿ.ಲೋಕೇಶ, ಭರತ್ ಪಾಟೀಲ್ ಅವರು ಉಪಸ್ಥಿತರಿದ್ದರೆಂದು ಟಿ.ಎಸ್.ಸೋರಗಾವಿಯವರು ಹೇಳಿದರು.