ಬೆಂಗಳೂರು: ಕಾರಿನಲ್ಲಿ ಪ್ರಯಾಣಿಸುವ ಹಿಂಬಂದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ನಾಲ್ಕು ಚಕ್ರದ ವಾಹನಗಳ ಚಾಲಕರು ಮತ್ತು ಸಹ ಪ್ರಯಾಣಿಕರು ಸುರಕ್ಷತಾ ಬೆಲ್ಟ್ ಧರಿಸಲು ವಿಫಲವಾದರೆ 1,000 ರೂ ದಂಡ ಪಾವತಿ ಮಾಡಬೇಕಾಗುತ್ತದೆ. ಹಿಂದೆ 500 ರೂ ಇದ್ದ ದಂಡವನ್ನು ಈಗ ಸಾವಿರಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶದ ನಂತರ ರಾಜ್ಯ ಪೊಲೀಸರು ಈ ನಿರ್ದೇಶನವನ್ನು ಹೊರಡಿಸಿದ್ದಾರೆ.
ಬುಧವಾರದಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ರಾಜ್ಯದ ಎಲ್ಲಾ ಕಮಿಷನರೇಟ್‌ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇದನ್ನು ಜಾರಿಗೊಳಿಸಲು ಸೂಚಿಸಲಾಗಿದೆ.
“ಮೋಟಾರು ವಾಹನ ಕಾಯಿದೆ, 1998 ರ ಸೆಕ್ಷನ್ 1948 ಸುರಕ್ಷತಾ ಬೆಲ್ಟ್‌ಗಳ ಬಳಕೆಯನ್ನು ಕಡ್ಡಾಯಗೊಳಿಸುತ್ತದೆ. ಸೆಕ್ಷನ್ – 194 ಬಿ ಉಪ-ವಿಭಾಗ 1 ರ ಪ್ರಕಾರ, ‘ಸೀಟ್ ಬೆಲ್ಟ್ ಧರಿಸದೆ ಮೋಟಾರು ವಾಹನವನ್ನು ಓಡಿಸುವವರು ಅಥವಾ ಸುರಕ್ಷತಾ ಬೆಲ್ಟ್ ಧರಿಸದ ಪ್ರಯಾಣಿಕರನ್ನು ಕೊಂಡೊಯ್ಯುವವರು 1,000 ದಂಡದೊಂದಿಗೆ ಶಿಕ್ಷೆಗೆ ಗುರಿಯಾಗಬಹುದು” ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಕೃಪೆ :http://news13.in