ಶಿರಸಿ:ಶಿರಸಿ ಉಪ ವಿಭಾಗದ ಗ್ರಾಮೀಣ-1 ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗವಾದ ತಿಗಣಿ, ಅಂಡಗಿ, ಭಾಶಿ, ಬಂಕನಾಳ ಹಾಗೂ ದಾಸನಕೊಪ್ಪ 11 ಕೆ.ವಿ ಮಾರ್ಗದಲ್ಲಿ ಅ. 20, ಗುರುವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಹಾಗೂ ಕಾಮಗಾರಿ ಪೂರ್ಣಗೊಂಡಲ್ಲಿ ಈ ಮೇಲೆ ತಿಳಿಸಿರುವ ಅವಧಿಯ ಮೊದಲೇ ವಿದ್ಯುತ್ ಸರಬರಾಜು ಮಾಡಲಾಗುವುದು.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.