ಅಂಕೋಲಾ: ಪ್ರಸ್ತುತ ದಿನಗಳು ಸ್ಪರ್ಧಾತ್ಮಕವಾಗಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ಹೆಜ್ಜೆ ಹಾಕಬೇಕು. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಲಾಗಿದೆ. ನಮ್ಮ ಗ್ರಾ,ಪಂ. ವ್ಯಾಪ್ತಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಂಬಾರ ಗ್ರಾ.ಪಂ ಅಧ್ಯಕ್ಷ ನಾರಾಯಣ ಮಡಿವಾಳ ಹೇಳಿದರು.
ಮಂಗಳವಾರ ಬೆಳಂಬಾರ ಗ್ರಾಮ ಪಂಚಾಯತಿಯಲ್ಲಿ ನೂತನವಾಗಿ ಆರಂಭಿಸಿದ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದು ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರಿಗೆ ಇದು ಉತ್ತಮವಾಗಿದೆ ಎಂದರು.
ಉಪಾಧ್ಯಕ್ಷೆ ನಾಗವೇಣಿ ಗೌಡ, ಸದಸ್ಯರಾದ ಮಂಜುನಾಥ ನಾಯ್ಕ, ಜಗದೀಶ ಖಾರ್ವಿ, ಅಜಿತ್ ಗೌಡ, ವೆಂಕಟೇಶ ಗೌಡ, ಬೇಬಿ ಗೌಡ, ಕುಸುಮಾ ಗೌಡ, ಶಶಿಕಲಾ ಖಾರ್ವಿ, ಜ್ಯೋತಿ ಖಾರ್ವಿ, ಮಂಜವ್ವ ಖಾರ್ವಿ, ಶರಣಪ್ಪ, ಪಿಡಿಓ ವಿದ್ಯಾ ಗೌಡ, ಸಿಬ್ಬಂದಿಗಳಾದ ಈಶ್ವರ ಹಳ್ಯಾರ, ವಿಶ್ವನಾಥ ಡಿ.ನಾಯ್ಕ, ಮಂಜುನಾಥ ಗೌಡ, ಮಂಜು ಮಡಿವಾಳ, ನಾಗರತ್ನ ಖಾರ್ವಿ ಇದ್ದರು.