ಮುಂಡಗೋಡ : ತಾಲೂಕಿನ ಹುನಗುಂದ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ನಿನ್ನೆ (ಅ .18) ಧಾತ್ರಿ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತವಾಗಿ ಪಠ್ಯ ವಿತರಣೆ ಮಾಡಲಾಯಿತು.
ಧಾತ್ರಿ ಫೌಂಡೇಶನ್ ಅಧ್ಯಕ್ಷರಾದ ಶ್ರೀನಿವಾಸ್ ಭಟ್ ಮತ್ತು ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ್ ಸಿದ್ದಿ ಅವರು ವಿದ್ಯಾರ್ಥಿಗಳ ಕುರಿತಾಗಿ ಮಾತನಾಡಿದರು. ಈ ಸಮಯದಲ್ಲಿ ತಾಲೂಕಿನ ಪ್ರಮುಖರಾದ ಪನಿರಾಜ್ ಹದಲಗಿ, ವಾದಿರಾಜ್ ಅವರು,ಗ್ರಾಮ ಪಂಚಾಯತ್, ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕ ವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.