ಶಿರಸಿ : ಲೇಖಕಿ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ ಈ ಬಾರಿಯ ಮಕ್ಕಳ ದಿನಾಚರಣೆ ಪ್ರಯುಕ್ತ ಹದಿನೈದು ವರ್ಷದ ಒಳಗಿನ ಮಕ್ಕಳ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಿದ್ದಾರೆ.
ನ.11 ರಂದು ನಗರದ ಅಫೋಲೋ ಇಂಟರ್ನ್ಯಾಷನಲ್ ಹೊಟೆಲ್ ಹಾಲ್ ನಲ್ಲಿ ನಡೆಯಲಿರುವ ಕವನ ಗಾಯನ ಸಿಂಚನ ಹಾಗೂ ರಾಜ್ಯಮಟ್ಟದ ಬಾಲ ಸಾಹಿತಿಗಳ ಕವಿಗೋಷ್ಠಿಗಾಗಿ 15 ವರ್ಷದೊಳಗಿನ ಬಾಲಸಾಹಿತಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.
ಇದು ರಾಜ್ಯಮಟ್ಟದ ಕವಿಗೋಷ್ಠಿಯಾಗಿದ್ದು ಕರ್ನಾಟಕದ ಎಲ್ಲ ಭಾಗದ 15 ವರ್ಷದ ಒಳಗಿನ ಮಕ್ಕಳಿಗೆ ( ಬಾಲ ಸಾಹಿತಿಗಳು ಮಾತ್ರ) ಭಾಗವಹಿಸಲು ಅವಕಾಶವಿದೆ, ಮಕ್ಕಳು ತಮ್ಮ ಸ್ವಂತ ಖರ್ಚಿನಲ್ಲಿ ಬರಲು ತಯಾರಿದ್ದರೆ ಮಾತ್ರ ಕವನ ಕಳಿಸಬೇಕು.
ಕವನದ ವಿಷಯ ವಸ್ತು ಹಾಗೂ ಶೀರ್ಷಿಕೆ ಅವರವರ ಸ್ವ ಇಚ್ಚೆಯಾಗಿರುತ್ತದೆ, ಕವನದ ಸಾಲುಗಳು 20 ರಿಂದ 25 ಸಾಲಿನ ಮಿತಿಯಲ್ಲಿ ಇರಬೇಕು ವಾಚಿಸುವ ಸಮಯ 3 ನಿಮಿಷದ ಕಾಲಾವಧಿಯಾಗಿರುತ್ತದೆ, ಕವನ ಕಳುಹಿಸುವ ಕೊನೆಯ ದಿನಾಂಕ ಅಕ್ಟೋಬರ್ 30, ಆಯ್ಕೆಯಾದ 10 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಕವನ ವಾಚಿಸಲು ಅವಕಾಶವಿರುತ್ತದೆ, ಕನ್ನಡ ಭಾಷೆಯ ಕವನಗಳಿಗೆ ಮಾತ್ರ ಅವಕಾಶ, ಕವನ ಕಳುಹಿಸುವಾಗ ಅದರ ಜೊತೆಗೆ ತಮ್ಮ ಪೂರ್ಣ ಹೆಸರು, ವಿಳಾಸ, ಶಾಲೆ, ವಯಸ್ಸು ಮತ್ತು ತರಗತಿಯನ್ನು ನಮೂದಿಸುವುದು ಖಡ್ಡಾಯವಾಗಿದೆ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಹಾಗೂ ಕವನ ಕಳುಹಿಸುವ ವಾಟ್ಸಾಪ್ ಸಂಖ್ಯೆ. : – 9480796646 ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಇನ್ನು ಕವನ ವಾಚಿಸಿದವರಿಗೆ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಗುವುದು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಾಟ್ಸಾಪ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.