• Slide
    Slide
    Slide
    previous arrow
    next arrow
  • ಭಾರತದ ಇತ್ತೀಚಿನ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲಿ ʼಕಾಂತಾರʼ ನಂ.1

    300x250 AD

    ನವದೆಹಲಿ: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ರಿಷಬ್‌ ಶೆಟ್ಟಿಯವರ ನಿರ್ದೇಶನ ಮತ್ತು ನಟನೆ ಇರುವ ‘ಕಾಂತಾರ’ ತನ್ನ ಯಶಸ್ಸಿನ ಉತ್ತುಂಗವನ್ನು ತಲುಪಿ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ಈ ಚಿತ್ರವು ತನ್ನ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ನಿರಂತರ ಏರಿಕೆಯನ್ನು ಕಾಯ್ದುಕೊಂಡಿದೆ. ಇದಲ್ಲದೆ, ಅದರ ಹೆಚ್ಚುತ್ತಿರುವ ಯಶಸ್ಸಿಗೆ ಮತ್ತೊಂದು ಗರಿ ಎಂಬಂತೆ  ‘ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ’ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

    IMDb ಟಾಪ್ 250 ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ‘ಕಾಂತಾರ’ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ಇದು ಅಭಿಮಾನಿಗಳಿಂದ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ರೇಟಿಂಗ್‌ ಪಡೆದ ಭಾರತೀಯ ಚಲನಚಿತ್ರವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ನಿರಂತರವಾಗಿ ಏರುತ್ತಿರುವ ಗಳಿಕೆಯನ್ನು   ಸಾಧಿಸಿದ ಮತ್ತೊಂದು ಮೈಲಿಗಲ್ಲನ್ನು ಸೇರಿಸಿದೆ.

    ಕಾಂತಾರ ಚಿತ್ರವು  ಮನರಂಜನೆಗಾಗಿ ನಿರ್ಮಾಣವಾದ ಚಿತ್ರವಾದರೂ ಭಾವನೆಗಳೊಂದಿಗೆ ಬೆಸೆದಿದೆ. ಸಂಸ್ಕೃತಿ ಮತ್ತು ತುಳುನಾಡ ಮಣ್ಣಿನೊಂದಿಗೆ ಬೆಸೆದುಕೊಂಡಿದೆ.  ಕಾಂತಾರ ನಿಜವಾಗಿಯೂ ಒಂದು ದಂತಕಥೆಯಾಗಿ ಉಳಿದು ಬಿಡುವ ಸಿನಿಮಾ. ತಾಂತ್ರಿಕ ತೇಜಸ್ಸಿನ ಪರಿಪೂರ್ಣ ಪರಾಕಾಷ್ಠೆಯೂ ಇದರಲ್ಲಿದೆ.

    ಜನಪ್ರಿಯ ನಟರಾದ ಪ್ರಭಾಸ್, ಧನುಷ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಮತ್ತು ಭಾರತದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಂತಹ ಪ್ರಮುಖ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಸಿನಿಮಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಕಾಂತಾರ’ ಚಿತ್ರವು ಎಲ್ಲಾ ಮೂಲೆಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ.

    300x250 AD

    ಕೃಪೆ:news13.in

    Share This
    300x250 AD
    300x250 AD
    300x250 AD
    Leaderboard Ad
    Back to top