ನವದೆಹಲಿ: ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ನ ಉನ್ನತ ಸ್ಥಾನಕ್ಕೆ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿದ್ದಾರೆ. ಖರ್ಗೆ ಗೆಲ್ಲುವ ನೆಚ್ಚಿ ಅಭ್ಯರ್ಥಿ ಎನ್ನಲಾಗಿದೆ.ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರು ಬ್ಯಾಲೆಟ್ ಪೇಪರ್ನಲ್ಲಿ ತಮ್ಮ ಆಯ್ಕೆಯ ಹೆಸರಿನ ಪಕ್ಕದಲ್ಲಿ ಟಿಕ್ ಮಾರ್ಕ್ ಹಾಕುವಂತೆ ಕೇಳಲಾಗಿದೆ.ಇಂದೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
“ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಆಯಾ ಮತಗಟ್ಟೆಗಳಲ್ಲಿ ತಾವು ಬೆಂಬಲಿಸುವ ಅಭ್ಯರ್ಥಿಗೆ ‘ಟಿಕ್’ ಚಿಹ್ನೆಯೊಂದಿಗೆ ಮತ ಚಲಾಯಿಸುತ್ತಾರೆ. ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ” ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.
“ಮತಪೆಟ್ಟಿಗೆಗಳು ಅಕ್ಟೋಬರ್ 18 ರಂದು ದೆಹಲಿ ತಲುಪಲಿವೆ ಮತ್ತು ಮತಗಳ ಎಣಿಕೆ ಅಕ್ಟೋಬರ್ 19 ರಂದು ನಡೆಯಲಿದೆ. ಎಐಸಿಸಿಯಲ್ಲೂ ಮತಗಟ್ಟೆ ಸ್ಥಾಪಿಸಲಾಗಿದೆ, ಅಲ್ಲಿ 50 ಕ್ಕೂ ಹೆಚ್ಚು ಜನರು ಮತ ಚಲಾಯಿಸುತ್ತಾರೆ. ಇಡೀ ಮತದಾನ ಪ್ರಕ್ರಿಯೆಯು ನ್ಯಾಯಯುತ ಮತ್ತು ಮುಕ್ತವಾಗಿರುತ್ತದೆ, ಅದರಲ್ಲಿ ಯಾವುದೇ ಸಂದೇಹವಿಲ್ಲ” ಎಂದಿದ್ದಾರೆ.
ಕೃಪೆ :http://news13.in