ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಗೊಂಡ ಸಬ್ ರಿಜಿಸ್ಟರ್ ಕಚೇರಿಯನ್ನ ಶಾಸಕ ದಿನಕರ ಶೆಟ್ಟಿ ಶನಿವಾರ ಉದ್ಘಾಟಿಸಿದರು.
ಗಣಪತಿ ಪೂಜೆಯ ಬಳಿಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿ ಸಬ್ ರಜಿಸ್ಟರ್ ಕಚೇರಿ ಖಾಸಗಿ ಕಟ್ಟಡದ ಮಹಡಿಯ ಮೇಲಿದ್ದು ವಯಸ್ಸಾದವರಿಗೆ, ಮಹಿಳೆಯರಿಗೆ, ವಿಶೇಷ ಚೇತನರಿಗೆ ತೆರಲಲು ಕಷ್ಟವಾಗುತ್ತದೆ. ಅದನ್ನು ಸ್ಥಳಾಂತರಿಸಬೇಕು ಎನ್ನುವುದು ಬಹು ವರ್ಷದ ಬೇಡಿಕೆಯಾಗಿತ್ತು ಎಂದರು.
ವಕೀಲರ ಸಂಘದವರು ವರ್ಷದ ಹಿಂದಯೇ ಈ ಬಗ್ಗೆಬೇಡಿಕೆ ಇಟ್ಟಿದ್ದರು. ಈ ಹಿಂದೆ ಹಳೇ ಡಿಎಫ್‌ಓ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಆರಂಭದಲ್ಲಿ ಚರ್ಚೆ ನಡೆದಿತ್ತು. ಚತುಷ್ಪಥ ಹೆದ್ದಾರಿಯ ಪಕ್ಕದಲ್ಲಿರುವುದರಿಂದ ಓಡಾಡಲು ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ ಕಟ್ಟಡ ಸೂಕ್ತ ಸ್ಥಳ ಎಂದು ವಕೀಲರ ಸಂಘದವರು ಸಲಹೆ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ಮತ್ತು ಉಪನೊಂದಾವಣೆ ಇಲಾಖೆಯ ಡೈರಕ್ಟರ್ ಜೊತೆ ಮಾತನಾಡಿ ಕಟ್ಟಡದಲ್ಲಿ ಅಗತ್ಯ ದುರಸ್ತಿಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಲಾಗಿತ್ತು. ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದು ಇಂದು ಉದ್ಘಾಟನೆಗೊಂಡಿದ್ದು, ಜನತೆಗೆ ಸೇವೆ ನೀಡಲು ಸಜ್ಜಾಗಿದೆ. ಡೈರಕ್ಟರದ ಮೋಹನರಾಜ್ ಪ್ರಯತ್ನದ ಮೇರೆಗೆ ಈ ಕಟ್ಟಡ ಸ್ಥಳಾಂತರವಾಗಿದೆ ಎಂದರು.
ಹೊನ್ನಾವರ ಪ.ಪಂ. ಕುಮಟಾ ಪುರಸಭೆಗೆ ಕುಡಿಯುವ ನೀರಿನ 85 ಲಕ್ಷ. ನೀಡಬೇಕಾಗಿತ್ತು. ಅಷ್ಟು ಹಣ ಇಲ್ಲದೇ ಇರುದರಿಂದ ರಾಜ್ಯ ಸರ್ಕಾರ 50 ಲಕ್ಷ ನೀಡುವ ಮೂಲಕ ನೆರವು ನೀಡಿದೆ ಎಂದರು. ಹೊನ್ನಾವರದ ಬಗ್ಗೆ ವಿಶೇಷ ಕಾಳಜಿ ವಹಿಸಿ 6 ಕೋಟಿ ವೆಚ್ಚದ ಬಸ್ ನಿಲ್ದಾಣ, 10 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣದ ಮುಂಭಾಗದ ಚರಂಡಿ ನಿರ್ಮಾಣ, 9.5 ಕೋಟಿ ವೆಚ್ಚದ ಪದವಿ ಕಾಲೇಜು ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿ ಈಗಾಗಲೇ ಮುಗಿದಿದ್ದು, ಮುಂದಿನ ದಿನದಲ್ಲಿ ಹಲವು ಪ್ರಮುಖ ಬೇಡಿಕೆಯು ಈಡೇರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕೆ.ವಿ. ನಾಯ್ಕ ಬಿಜೆಪಿ ತಾಲೂಕ ಅಧ್ಯಕ್ಷ ರಾಜು ಭಂಡಾರಿ ಪ.ಪಂ.ಉಪಾಧ್ಯಕ್ಷೆ ನಿಶಾ ಶೇಟ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಸದಸ್ಯರಾದ ಶಿವರಾಜ ಮೇಸ್ತ, ವಿಜಯ ಕಾಮತ್, ಮಹೇಶ ಮೇಸ್ತ, ಪ್ರಮುಖರಾದ ಉಮೇಶ ನಾಯ್ಕ, ಎಂ.ಜಿ.ನಾಯ್ಕ, ಜಿ.ಜಿ.ಶಂಕರ, ಜಿ.ಎನ್.ಗೌಡ, ಉದ್ದಿಮೆದಾರರಾದ ಶ್ರೀಕಾಂತ ನಾಯ್ಕ, ವಕೀಲರಾದ ಎಲ್. ಆರ್. ನಾಯ್ಕ, ಎಸ್.ಜಿ. ಹೆಗಡೆ, ಪಿ.ಎಸ್. ಭಟ್, ಭಾಸ್ಕರ ಭಂಡಾರಿ, ಸರಕಾರಿ ಅಭಿಯೋಜಕ ಪ್ರಮೋದ ಭಟ್, ಪಿಡಬ್ಲುಡಿ ಇಂಜನಿಯರ್ ಎಂ.ಎಸ್. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.