ಸಿದ್ದಾಪುರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ ಮತ್ತು ತೋಟಗಾರಿಕೆ ಇಲಾಖೆ ಸಿದ್ದಾಪುರ ವತಿಯಿಂದ ಅಡಿಕೆ ತೋಟದಲ್ಲಿ ಭೂ ಅಂತರ್ಗತ ಬಸಿಕಾಲುವೆ ನಿರ್ಮಾಣ ಕ್ಷೇತ್ರೋತ್ಸವ ಮತ್ತು ರೈತ ಸಂವಾದ ಕಾರ್ಯಕ್ರಮವನ್ನು ತಂಗಾರಮನೆ ಚಂದ್ರಶೇಖರ ಭಟ್ಟರ ಪ್ರಕೃತಿ ಹೋ ಸ್ಟೇ ತೋಟದಲ್ಲಿ ಆಯೋಜಿಸಲಾಗಿತ್ತು.
ಮೊದಲಿಗೆ ಅಡಿಕೆ ಬೇರು ಹುಳ ಬಾಧಿತ ಹಳೆ ಅಡಿಕೆ ತೋಟಗಳು ಭೂ ಅಂತರ್ಗತ ಬಸಿಗಾಲುವೆಗಳ ನಿರ್ಮಾಣದಿಂದ ಸಂಪೂರ್ಣ ಪುನ:ಶ್ಚೇತನ ಹಾಗೂ ಹೊಸ ಅಡಿಕೆ ನಿರ್ಮಾಣವನ್ನು ಭೂ ಅಂತರ್ಗತ ಬಸಿಕಾಲುವೆ ನಂತರದಲ್ಲಿ ಕೈಗೊಂಡಿರುವುದನ್ನು ರೈತರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅರುಣ್ ಹೆಚ್.ಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂ ಅಂತರ್ಗತ ಬಸಿಗಾಲುವೆ ಅಗತ್ಯ, ಮಹತ್ವ ಮತ್ತು ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಹಸರಗೋಡು ಗ್ರಾಮ ಪಂಚಾಯತ ಅಧ್ಯಕ್ಷೆ ಗೌರಿ ಗೌಡ ವಹಿಸಿದ್ದರು. ಡಾ.ದೇವಸ್ಪತಿ ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಶಕ್ತಿಬಿಂದು ಪ್ರದರ್ಶನದಲ್ಲಿ ಮಾಹಿತಿ ನೀಡಿದರು. ವೆಂಕಟೇಶ ಹೆಗಡೆ ಬೌಗೋಳಿಕ ಮಹತ್ವ ಮತ್ತು ನಿರ್ವಾಹಣೆ ಕುರಿತು ಮಾಹಿತಿ ನೀಡಿದರು. ಕಾಶಿನಾಥ ಪಾಟೀಲ್ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಮಹಾಬಲೇಶ್ವರ ಬಿ.ಎಸ್ ಅಡಿಕೆ ತೋಟದಲ್ಲಿ ಎಲೆಚುಕ್ಕಿ ರೋಗದ ನಿರ್ವಾಹಣೆ ಕುರಿತು ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರಾದ ರಾಮಚಂದ್ರ ಭಟ್ಟ ಮತ್ತು ಆನಂದ ಪೈ ಸದಸ್ಯರು ಗ್ರಾಮ ಪಂಚಾಯತ ಹಸರಗೋಡು ಅನುಭವ ಹಂಚಿಕೊಂಡರು.
ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಬಸಪ್ಪಾ ಬಂಡಿ, ರವಿ ಸೋಮಕ್ಕನವರ, ತೇಜ್ವೀ ನಾಯ್ಕ ಮತ್ತ ದೀಪಾ ಮಡಿವಾಳ ಸಹಕಾರ ನೀಡಿದರು.