ಹೊನ್ನಾವರ: ಮೈಸೂರಿನಲ್ಲಿ ದಸರಾ ಪ್ರಯಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವಕ್ಕೆ ಆಯ್ಕೆಯಾಗಿದ್ದ ಪಟ್ಟಣದ ಸಿರಿ ಕಿಣಿಯವರಿಂದ ನಾದಬ್ರಹ್ಮ ಸಾಂಸ್ಕೃತಿಕ ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶನ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ನೃತ್ಯಗುರು ವಿದುಷಿ ಡಾ.ಸಹನಾ ಭಟ್ ಹುಬ್ಬಳ್ಳಿ ಇವರ ನಿರ್ದೇಶನದಲ್ಲಿ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ ಬೆಂಗಳೂರು ಇವರ ಸುಮಧುರ ಹಾಡುಗಾರಿಕೆಯಲ್ಲಿ ‘ಅಲರಿಪು ಉಮಾ ಮಹೇಶ್ವರಿ ವರ್ಣ’ ಹಾಗೂ ‘ಕಾದಿರುವಳು ಶಬರಿ’ ದೇವರನಾಮ ಪ್ರಸಂಗಕ್ಕೆ ಅದ್ಭುತವಾಗಿ ನೃತ್ಯ ಪ್ರದರ್ಶನವನ್ನು ನೀಡಿ ನೆರೆದ ಪ್ರೇಕ್ಷಕರಿಂದ ಹಾಗೂ ಮೈಸೂರು ದಸರಾ ಸಮಿತಿಯಿಂದ ಅಭಿನಂದಿಸಲ್ಪಟ್ಟಳು.
ಕಾರ್ಯಕ್ರಮದಲ್ಲಿ ಮೃದಂಗದಲ್ಲಿ ವಿದ್ವಾನ್ ಶಶಿಶಂಕರ, ಮೈಸೂರು ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಕೇಶ ಮೈಸೂರು ಸಾಥ್ ನೀಡಿದರು.