Slide
Slide
Slide
previous arrow
next arrow

ಜಿಲ್ಲೆಯ ಪುಟ್ಟು ಕುಲಕರ್ಣಿಗೆ ‘ಆದಿಕವಿ ಪುರಸ್ಕಾರ’, ಡಾ.ವಿಶ್ವನಾಥ ಸುಂಕಸಾಳಗೆ ‘ವಾಗ್ದೇವಿ ಪ್ರಶಸ್ತಿ’

300x250 AD

ಅಂಕೋಲಾ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ 2021 ಮತ್ತು 2022ನೇ ಸಾಲಿನ ‘ಆದಿಕವಿ ಪುರಸ್ಕಾರ’ ಹಾಗೂ ‘ವಾಗ್ದೇವಿ ಪ್ರಶಸ್ತಿ’ಗಳನ್ನು ಪ್ರಕಟಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಪ್ರಶಸ್ತಿಗಳನ್ನು ವಿತರಣೆ ಮಾಡಲಿಲ್ಲ. ಹೀಗಾಗಿ ಎರಡು ವರ್ಷಗಳ ಪ್ರಶಸ್ತಿಗಳಿಗೆ ಇದೀಗ ಆಯ್ಕೆ ಮಾಡಲಾಗಿದೆ. ‘ಆದಿಕವಿ ಪುರಸ್ಕಾರ’ಕ್ಕೆ ಸಾಹಿತಿ ಬೆಂಗಳೂರಿನ ಡಾ. ಬಾಬು ಕೃಷ್ಣಮೂರ್ತಿ (2021ನೇ ಸಾಲಿಗೆ) ಅವರನ್ನು ಹಾಗೂ ಸಾಹಿತಿ ಅಂಕೋಲಾದ ಪುಟ್ಟು ಪರಶುರಾಮ ಕುಲಕರ್ಣಿ (2022ನೇ ಸಾಲಿಗೆ) ಅವರನ್ನು ಆಯ್ಕೆ ಮಾಡಲಾಗಿದೆ.

ಅದೇ ರೀತಿ ‘ವಾಗ್ದವಿ ಪ್ರಶಸ್ತಿ’ಗೆ ಸಂಸ್ಕೃತ ವಿದ್ವಾಂಸರಾದ ಉತ್ತರ ಕನ್ನಡ ಮೂಲದ ಪ್ರಸ್ತುತ ಶೃಂಗೇರಿಯಲ್ಲಿರುವ ಡಾ. ವಿಶ್ವನಾಥ ಸುಂಕನಾಳ (2021ನೇ ಸಾಲಿಗೆ) ಅವರನ್ನು ಮತ್ತು ಲೇಖಕ ಬೆಂಗಳೂರಿನ ರೋಹಿತ್ ಚಕ್ರತೀರ್ಥ (2022ನೇ ಸಾಲಿಗೆ) ಅವರನ್ನು ಆಯ್ಕೆ ಮಾಡಲಾಗಿದೆ.

300x250 AD

ಪುರಸ್ಕಾರ ಹಾಗೂ ಪ್ರಶಸ್ತಿಯು ತಲಾ ಒಂದು ಲಕ್ಷ ನಗದು, ಸನ್ಮಾನ ಪತ್ರ, ವಾಲ್ಮೀಕಿ ಮಹರ್ಷಿಗಳ ವಿಗ್ರಹ, ಸರಸ್ವತಿ ವಿಗ್ರಹಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಶಸ್ತಿಗಳನ್ನು ಅ.16ರಂದು ತುಮಕೂರಿನ ಸಿದ್ದಗಂಗಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು.

Share This
300x250 AD
300x250 AD
300x250 AD
Back to top