Slide
Slide
Slide
previous arrow
next arrow

ಪರೇಶ ಮೇಸ್ತಾನದು ಆಕಸ್ಮಿಕ ಸಾವು; ಸಿಬಿಐ ವರದಿಯಲ್ಲಿ ಉಲ್ಲೇಖ

300x250 AD

ಬೆಂಗಳೂರು: ರಾಜ್ಯದ ಗಮನ ಸೆಳೆದ ಪರೇಶ್‌ ಮೇಸ್ತಾ ಸಾವು ಪ್ರಕರಣಕ್ಕೆ ಹೊಸ ತಿರುವುದು ಸಿಕ್ಕಿದ್ದು, ಹೊನ್ನಾವರದ ಯುವಕನದ್ದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ತಿಳಿಸಿದೆ. ಸೋಮವಾರ ಹೊನ್ನಾವರದ ನ್ಯಾಯಾಲಯಕ್ಕೆ ಸಿಬಿಐ ತಂಡವು ಈ ಕುರಿತು ವರದಿ ಸಲ್ಲಿಸಿದ್ದು, “ಪರೇಶ್‌ ಮೇಸ್ತಾ ಅವರದ್ದು ಕೊಲೆಯಲ್ಲ. ಅದು ಆಕಸ್ಮಿಕ ಸಾವು” ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

2017 ಡಿಸೆಂಬರ್‌ 6 ರಂದು ಹೊನ್ನಾವರದಲ್ಲಿ ಅನ್ಯ ಕೋಮುಗಳ ಮಧ್ಯೆ ಗಲಭೆ ನಡೆದಿತ್ತು. ಇದೇ ವೇಳೆ ಮೀನುಗಾರ ಪರೇಶ್‌ ಮೇಸ್ತಾ ಅವರು ನಾಪತ್ತೆಯಾಗಿದ್ದರು. ಅಲ್ಲದೆ, ಡಿಸೆಂಬರ್‌ 8 ರಂದು ಪರೇಶ್‌ ಮೇಸ್ತಾ ಶವವು ನಗರದಲ್ಲಿರುವ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿತ್ತು. ಮೇಸ್ತಾ ಅವರನ್ನು ಮುಸ್ಲಿಮರೇ ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಹಿಂದೂ ಸಂಘಟನೆಗಳು ಆರೋಪ ಮಾಡಿದ್ದವು. ಹಾಗಾಗಿ, ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾಗಿತ್ತು.

300x250 AD

ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಹಾಗಾಗಿ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಆದರೆ, ನಾಲ್ಕೂವರೆ ವರ್ಷದ ತನಿಖೆ ನಂತರ ಸಿಬಿಐ ನ್ಯಾಯಾಲಯಕ್ಕೆ ವಿಸ್ತೃತ ವರದಿ ಸಲ್ಲಿಸಿದೆ. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನವೆಂಬರ್‌ 16 ಕ್ಕೆ ಮುಂದೂಡಿದೆ.

Share This
300x250 AD
300x250 AD
300x250 AD
Back to top