ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ ರಿ.ಶಿರಸಿ. ಇವರ ವತಿಯಿಂದ ಶಿರಸಿಯ ಇಕ್ರಾ ಶಾಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಜರುಗಿತು. ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆದ ಕ್ರೀಡಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಸದಸ್ಯರಿಗೆ ಅಧಿಕೃತವಾಗಿ ಒಕ್ಕೂಟದ ಕಾರ್ಡ ವಿತರಿಸಲಾಯಿತು. ಸಿರ್ಸಿ, ಸಿದ್ದಾಪುರ ಯಲ್ಲಾಪುರ ತಾಲೂಕಿನಿಂದ ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕೇತರರು ಸುಮಾರು 100 ಕ್ಕೂ ಹೆಚ್ಚು ಜನ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಶಾಂತಾರಾಮ ನಾಯ್ಕ ಮಾತನಾಡಿ ಪ್ರಸ್ತುತ ದಿನದಲ್ಲಿ ಖಾಸಗಿ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ತೊಂದರೆ ಸರ್ಕಾರದ ಮಲತಾಯಿ ಧೋರಣೆಗಳ ಕುರಿತು ವಿವರಿಸಿದರು. ಮತ್ತು ಒಕ್ಕೂಟ ಪ್ರಾರಂಭ ಆದ ದಿನದಿಂದ ಈ ವರೆಗೆ ಕೈಗೊಂಡ ಉತ್ತಮ ಶಿಕ್ಷಕ ಪ್ರಶಸ್ತಿ, ನಿವೃತ್ತ ಶಿಕ್ಷಕರಿಗೆ ಸನ್ಮಾನ , ಎಸ್ ಎಸ್ ಎಲ್ ಸಿ . ಶೇಕಡಾ 100 ಫಲಿತಾಂಶ ಪಡೆದ ಶಾಲೆಗಳಿಗೆ ನೀಡಿದ ಸನ್ಮಾನ ಕುರಿತು ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ಬಾಸ್ ತೋನ್ಸೆ ಸೆಕ್ರೆಟರಿ ಇಕ್ರಾ ಎಜುಕೇಷನ್ ಸೊಸೈಟಿ. ಅವರು ನೇರವೇರಿಸಿ ಸರ್ಕಾರದಿಂದ ದೊರೆಯಬಹುದಾದ ದೊರಕಿಸಿ ಕೊಡಬಹುದಾದ ಸವಲತ್ತುಗಳನ್ನು ಕೊಡಿಸುವಲ್ಲಿ ಶಿಕ್ಷಕರ ಜೊತೆ ಆಡಳಿತ ಮಂಡಳಿ ಸದಾ ಬೆಂಬಲಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸನ್ನ ಹೆಗಡೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಇಕ್ರಾ ಕಾಲೇಜ್ ಸಿರ್ಸಿ ಇವರು ಶಿಕ್ಷಕರಾಗುವುದು ಪುಣ್ಯದ ಕೆಲಸ ವೇತನ ತಾರತಮ್ಯವನ್ನು ಸರಿಪಡಿಸಿಕೊಳ್ಳಬೇಕು ಅದು ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ.ಅಬ್ದುಲ್ ಹಸನ್ ಸಾಬ್ ಅವರು ಮಾತನಾಡಿ ಅನೇಕ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ . ತಮ್ಮೆಲ್ಲರ ಶ್ರಮ ದೊಡ್ಡದು ಎಂದರು. ಶಾಹಿದಾ ಅಂಕೋಲಾ ಮುಖ್ಯ ಶಿಕ್ಷಕರು ಇಕ್ರಾ ಶಾಲೆ ಸ್ವಾಗತಿಸಿದರು.
ಕ.ರಾ.ಖಾ.ಶಾ.ಶಿ.ಹಾ.ಶಿ.ಒ. ಪ್ರಧಾನ ಕಾರ್ಯದರ್ಶಿ ಶ್ರೀಲಕ್ಷ್ಮಿ ಬಟ್ಟ ಕಾರ್ಯಕ್ರಮ ನಿರೂಪಿಸಿದರು.ಇಕ್ರಾ ಶಾಲೆ ಪ್ರಾಂಶುಪಾಲ ರವೀಂದ್ರ ಭಟ್ಟ ಸಿರ್ಸಿ ವಂದಿಸಿದರು.