ಶಿರಸಿ: ತಾಲೂಕಿನ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ 2 ನೇ ವರ್ಷದ 2021-2022ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಇತ್ತೀಚೆಗೆ ಬೊಪ್ಪನಳ್ಳಿ ಶಾಲಾ ರಂಗಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಶಂಕರ ಹೆಗಡೆ ಮಾತನಾಡಿ, ಸಂಘವು ವರದಿ ವರ್ಷದಲ್ಲಿ 50,887 ಲೀಟರ್ ಹಾಲನ್ನು ಉತ್ಪಾದಕರಿಂದ ಖರೀದಿಸಿ 46,690 ಲೀಟರ್ ಹಾಲನ್ನು ಧಾರವಾಡ ಒಕ್ಕೂಟಕ್ಕೆ 13,28227. ರೂ. ಗಳಿಗೆ ಹಾಗೂ ಸ್ಥಳೀಯವಾಗಿ 4,191 ಲೀಟರ್ ಹಾಲನ್ನು 1,46,685 ರೂ .ಗಳಿಗೆ ಮಾರಾಟ ಮಾಡಿದೆ .ಮತ್ತು6,72,283 ರೂ. ಗಳ ಪಶು ಆಹಾರ ಮಾರಾಟ,7,840 ರೂ. ಗಳ ಖನಿಜ ಮಿಶ್ರಣ ಮಾರಾಟ ಮಾಡಿ ಒಟ್ಟು 2,38,941 ರೂ. ಮೊತ್ತದ ವ್ಯಾಪಾರಿ ಲಾಭವಾಗಿದ್ದು ,ಸಂಘಕ್ಕೆ ವರದಿ ವರ್ಷದಲ್ಲಿ 92,260 ರೂ.ಗಳ ನಿಕ್ಕಿ ಲಾಭವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವರದಿ ವರ್ಷದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಹಾಲು ಉತ್ಪಾದಕ 3 ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸೀತಾರಾಮ ವಿಷ್ಣು ಭಟ್ ಅವರು ಸಂಘದ ವರದಿ ವರ್ಷದ ಆಯ- ವ್ಯಯ ಮಂಡಿಸಿದರು .
ಪ್ರಭುವೀರ ಮಾತನಾಡಿ ಹಸುಗಳಿಗೆ ಒಳ್ಳೆಯ ತಳಿಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಹಸುಗಳಿಗೆ ಬರುವ ಬೇರೆಬೇರೆ ರೋಗಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಹಸುಗಳಿಗೆ ಕ್ಯಾಲ್ಸಿಯಮ್ಮಿನ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು . ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಉಳಿದ ಸದಸ್ಯರುಗಳಾದ ವಿನಾಯಕ ಪ್ರಭಾಕರ ಹೆಗಡೆ, ತಿಮ್ಮಪ್ಪ ಗಣಪತಿ ಹೆಗಡೆ, ಶಾಂತಾರಾಮ್ ಸುಬ್ರಾಯ ಶಾಸ್ತ್ರಿ , ಶ್ರೀಪಾದ ಗಣಪತಿ ಹೆಗಡೆ, ರಾಮಚಂದ್ರ ವೆಂಕಟ್ರಮಣ ಹೆಗಡೆ, ಕೃಷ್ಣಮೂರ್ತಿ ಗಣಪತಿ ಹೆಗಡೆ ಶ್ರೀಮತಿ ಮಧುರಾ ಎಸ್. ಹೆಗಡೆ ,ಶ್ರೀಮತಿ ಸೌಭದ್ರ ಗಣಪತಿ ಹೆಗಡೆ, ದಾಮೋದರ ಮಂಜುನಾಥ ಮೇಸ್ತ ಹಾಗೂ ಊರಿನ ಹಿರಿಯರಾದ ಶ್ರೀಪತಿ ಗಣಪತಿ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಸಂಘದ ಎಲ್ಲ ಸದಸ್ಯರು ಹಾಲು ಉತ್ಪಾದಕರು ಗ್ರಾಮಸ್ತರು ಪಾಲ್ಗೊಂಡಿದ್ದರು. ವಿನಾಯಕ ಪ್ರಭಾಕರ ಹೆಗಡೆ ಯವರ ವಂದನಾರ್ಪಣೆಯೊಂದಿಗೆ,ಚಹಾ ತಿಂಡಿ ವಿತರಿಸಲಾಯಿತು