ಅಂಕೋಲಾ : ಸರಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದಲ್ಲಿ ಕರ್ನಾಟಕ ಸಂಘ (ರಿ) ಅಂಕೋಲಾ ವತಿಯಿಂದ ಸ್ವಾತಂತ್ರ್ಯ ‘ಹೋರಾಟದಲ್ಲಿ ಅಂಕೋಲಿಗರ ಪಾತ್ರ’ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉಪನ್ಯಾಸಕರಾಗಿ ಆಗಮಿಸಿದ ರಾಜೇಶ ನಾಯಕ ಸೂರ್ವೆಯವರು ಕಾಲು ಶತಮಾನಗಳ ಕಾಲ ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಗಾಥೆಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟು, ತ್ಯಾಗ-ಬಲಿದಾನಕ್ಕೆ ಅಂಕೋಲೆಯವರ ಕೊಡುಗೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ರಾಜೀವ ನಾಯಕ, ನಾವೆಲ್ಲ ನಮ್ಮ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಗೌರವ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯೆ ರೇಖಾ ರಾವ್ ಅವರು ಈ ನೆಲದ ಅಂದಿನ ಸ್ವಾತಂತ್ರ್ಯ ಹೋರಾಟ ನಮ್ಮನ್ನೆಲ್ಲ ರೋಮಾಂಚನಗೊಳಿಸುತ್ತದೆ. ಅವರ ತ್ಯಾಗ ಬಲಿದಾನಗಳ ನೆರಳಿನಲ್ಲಿ ನಾವು ಬದುಕು ಕಟ್ಟಬೇಕಾಗಿದೆ ಎಂದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಎಸ್.ಆರ್. ನಾಯಕ ಸ್ವಾಗತಿಸಿದರು. ಎ.ಎಂ.ಮುಲ್ಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೊನ್ನಪ್ಪ ನಾಯಕ ವಂದಿಸಿದರು. ವಾಸುದೇವ ನಾಯಕ ನಿರೂಪಿಸಿದರು. ಉಪನ್ಯಾಸಕ ಮಹೇಶ ನಾಯಕ, ಜಿ.ಎಸ್.ಗೌಡ, ಸಾಹಿತಿ ನಾಗೇಂದ್ರ ನಾಯಕ ತೊರ್ಕೆ, ಮಂಜುನಾಥ ಇಟಗಿ ಇತರರು ಸಾಕ್ಷಿಯಾಗಿದ್ದರು.