Slide
Slide
Slide
previous arrow
next arrow

ರೂಪಾಲಿ ನಾಯ್ಕರ ಹೆಚ್ಚುವರಿ ಪರಿಹಾರ, ಉದ್ಯೋಗದ ಆಗ್ರಹಕ್ಕೆ ಮನ್ನಣೆ

300x250 AD

ಕಾರವಾರ: ತಾಲ್ಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಒಟ್ಟೂ 73.06 ಎಕರೆ ಜಮೀನಿಗೆ ಮಾರುಕಟ್ಟೆ ದರದಂತೆ ಹೆಚ್ಚಿನ ಪರಿಹಾರವನ್ನು ನಿಗದಿ ಮಾಡಿ, ಆ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿ, ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವಂತೆ ಶಾಸಕಿ ರೂಪಾಲಿ ಎಸ್.ನಾಯ್ಕ ನೀಡಿದ ಮನವಿಗೆ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್.ನಿರಾಣಿ ಪೂರಕವಾಗಿ ಸ್ಪಂದಿಸಿದ್ದಾರೆ.
ಹೆಚ್ಚಿನ ಪರಿಹಾರ ನೀಡಲು ಸಚಿವರಾದ ಮುರುಗೇಶ ನಿರಾಣಿ ತಾತ್ವಿಕವಾಗಿ ಸಮ್ಮತಿಸಿದ್ದು, ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಭೂಮಿ ನೀಡಿದವರೊಂದಿಗೆ ಸಭೆ ನಡೆಸಿ ದರವನ್ನು ನಿಗದಿಪಡಿಸಿ ತಮಗೆ ಮಾಹಿತಿ ನೀಡುವಂತೆ ಸಚಿವರು ಶಾಸಕರಿಗೆ ತಿಳಿಸಿದ್ದಾರೆ.
ಕಾರವಾರ ತಾಲ್ಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಒಟ್ಟೂ 209 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು 1997 ರಲ್ಲಿ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಇದರಲ್ಲಿ 73 ಎಕರೆ ಭೂಮಿಯನ್ನು ಕಲಂ 28(4)ರಡಿ 24/02/2005 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 2011ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಭೂಮಿ ದರ ನಿರ್ಧರಣಾ ಸಮಿತಿ ಸಭೆಯಲ್ಲಿ ಎಕರೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಶಿಫಾರಸ್ಸು ಮಾಡಿತ್ತು ಆದರೆ, ಶಿಫಾರಸ್ಸು ಮಾಡಿದ ಭೂಮಿಯ ದರವೂ ತುಂಬಾ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ದರವನ್ನು ನಿಗದಿ ಪಡಿಸಬೇಕಾಗಿ ಹಲವಾರು ರೈತರು ತಮ್ಮಲ್ಲಿ ಮನವಿ ಮಾಡಿರುವುದಾಗಿ ಶಾಸಕರು ತಿಳಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಫೆ.2ರಂದು ನಡೆದ ಕೆಡಿಪಿ ಸಭೆಯಲ್ಲಿಯೂ ಕೂಡ ಈ ಬಗ್ಗೆ ಪ್ರಶ್ನೆ ಮಾಡಿ ಈಗಾಗಲೇ ಈ ಪ್ರದೇಶದಲ್ಲಿ ಒಂದು ಗುಂಟೆಗೆ 10 ಲಕ್ಷ ರೂ. ತನಕ ಮಾರುಕಟ್ಟೆ ದರ ಇದೆ. ಆದರೆ, ನಿಗದಿ ಪಡಿಸಿದ ದರ ತೀರಾ ಕಡಿಮೆಯಾಗಿದೆ ಎಂದು ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ ಅವರು ಬೆಂಗಳೂರಿನಲ್ಲಿ ಸಭೆ ಕರೆದು ಈ ಕುರಿತು ಚರ್ಚಿಸಲು ತಿಳಿಸಿದ್ದರು. ಈ ಸಭೆಯನ್ನು ಕೂಡಲೆ ನಡೆಸಿ ತಮ್ಮ ಕ್ಷೇತ್ರದ ಹಲವಾರು ಯುವಕರು ಪ್ರತಿದಿನ ಉದ್ಯೋಗಕ್ಕಾಗಿ ನೆರೆಯ ಗೋವಾ ರಾಜ್ಯಕ್ಕೆ ತೆರಳುತ್ತಾರೆ. ಹಲವು ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸಲು ತಾವು ಕೂಡಲೇ ಮುಡಗೇರಿಯಲ್ಲಿ ಒಂದು ಕೈಗಾರಿಕೆಯನ್ನು ಸ್ಥಾಪಿಸಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಅವಶ್ಯಕವಾಗಿದೆ. ಕೈಗಾರಿಕಾ ಪ್ರದೇಶ ಮಾಡಲು ಸ್ವಾಧೀನ ಮಾಡಿಕೊಂಡ ಜಮೀನಿನ ಪ್ರತಿ ಕುಟುಂಬಕ್ಕೆ ಉದ್ಯೋಗದ ಭರವಸೆ ನೀಡುವುದನ್ನು ಪರಿಹಾರದ ಆದೇಶದಲ್ಲಿ ಸೇರ್ಪಡೆ ಮಾಡಬೇಕೆಂದು ಶಾಸಕರು ಮನವಿ ಮಾಡಿದ್ದರು.

300x250 AD
Share This
300x250 AD
300x250 AD
300x250 AD
Back to top