ಮುಂಡಗೋಡ: ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಮಂಗಳವಾರ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಿತು.
ಜಿ.ಪಂ ಮಾಜಿ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿ, ಆಟಗಳಲ್ಲಿ ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ದೇಶಮಟ್ಟದಲ್ಲಿ ಆಯ್ಕೆಯಾಗಿ ತಾಲೂಕಿನ ಹಿರಿಮೆ ಹೆಚ್ಚಿಸಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಸ್.ಪಟಗಾರ ಮಾತನಾಡಿದರು. ಖೋ ಖೋದಲ್ಲಿ ಪ್ರಥಮ ಸ್ಥಾನ ಎಚ್‌ಪಿಎಸ್ ರೋಟರಿ ಶಾಲೆ, ದ್ವಿತೀಯ ಎಚ್‌ಪಿಎಸ್ ಹರಗನಳ್ಳಿ, ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಎಚ್‌ಪಿಎಸ್ ಮೈನಳ್ಳಿ, ದ್ವಿತೀಯ ಎಚ್‌ಪಿಎಸ್ ಕಾತೂರ, ವ್ಹಾಲಿಬಾಲ್‌ನಲ್ಲಿ ಪ್ರಥಮ ಎಚ್‌ಪಿಎಸ್ ಬಡ್ಡಿಗೇರಿ, ದ್ವಿತೀಯ ಕೆಪಿಎಸ್ ಮಳಗಿ, ಥ್ರೋಬಾಲ್‌ನಲ್ಲಿ ಪ್ರಥಮ ಎಚ್‌ಪಿಎಸ್ ರೋಟರಿ ಶಾಲೆ, ದ್ವಿತೀಯ ಎಚ್‌ಪಿಎಸ್ ಇಂದೂರ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಿ.ಎನ್.ನಾಯಕ್, ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಉದ್ಯಮಿ ಲಕ್ಷ್ಮಣ ಬನಸೋಡೆ ಮುಂತಾದವರು ಇದ್ದರು.