ಯಲ್ಲಾಪುರ: ಪಟ್ಟಣದ ವಿಕಾಸ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ 2021-22ನೇ ವರ್ಷಾಂತ್ಯಕ್ಕೆ 1,12,55,871 ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಮೂರೂ ಶಾಖೆಗಳೂ ಉತ್ತಮವಾಗಿ ಕಾರ್ಯನಿರ್ವಹಿಸಿ ಲಾಭದಲ್ಲಿ ಮುನ್ನಡೆಯುತ್ತಿವೆ ಎಂದು ವಿಕಾಸ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ ಹೇಳಿದರು.
ಅವರು ಸೋಮವಾರ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ಶೇರು ಬಂಡವಾಳ 647.73 ಲಕ್ಷ ರೂಪಾಯಿ, ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 735.96 ಲಕ್ಷ ರೂಪಾಯಿ, ಠೇವುಗಳು 14165.72 ಲಕ್ಷ ರೂಪಾಯಿ, ಪಡೆದ ಸಾಲಗಳು 2664.13 ಲಕ್ಷ ರೂಪಾಯಿ, ಗುಂತಾವಣಿಗಳು 4266.62 ಲಕ್ಷ ರೂಪಾಯಿ, ಸಾಲ ಮತ್ತು ಮುಂಗಡಗಳು 13285.87 ಲಕ್ಷ ರೂಪಾಯಿ, ದುಡಿಯುವ ಬಂಡವಾಳ 18555.47 ಲಕ್ಷ ರೂಪಾಯಿ, ಗಳಿಸಿದ ಲಾಭ 112.56 ಲಕ್ಷ ರೂಪಾಯಿ, ಸಾಲ ವಸೂಲಾತಿ ಪ್ರಮಾಣ ಶೇ 98.93 ಲಕ್ಷ ರೂಪಾಯಿ ಹಾಗೂ ಎನ್.ಪಿ.ಎ ಪ್ರಮಾಣ ಶೇ.0 ಆಗಿದೆ ಎಂದು 31 ಮಾರ್ಚ್ 2022 ಕ್ಕೆ ಇದ್ದಂತೆ ಬ್ಯಾಂಕಿನ ‘25’ನೇ ಅಢಾವೆಯ ಪಕ್ಷಿ ನೋಟದ ಕುರಿತು ಮಾಹಿತಿ ನೀಡಿದರು.
ನಮ್ಮ ಬ್ಯಾಂಕು ಗ್ರಾಹಕರ ಸೇವಾ ದೃಷ್ಟಿಯಿಂದ ಉತ್ತಮವಾದ ಹೆಸರನ್ನು ಪಡೆದುಕೊಂಡಿದೆ. ಎಫ್ಎಸ್ಡಬ್ಲುಎಮ್ ಪಟ್ಟಣ ಸಹಕಾರ ಬ್ಯಾಂಕು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ದೃಷ್ಟಿಯಲ್ಲಿ ಗುರುತಿಸಿಕೊಂಡಿದೆ. ಬ್ಯಾಂಕಿನ 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು 23 ನವಂಬರ್ 2022 ಶುಕ್ರವಾರ, ಮಧ್ಯಾಹ್ನ 3 ಘಂಟೆಗೆ ಬ್ಯಾಂಕಿನ ಅಧ್ಯಕ್ಷರಾದ ಮುರಳಿ ಎಂ.ಹೆಗಡೆ ಇವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಕರೆಯಲಾಗಿದೆ. ಸದಸ್ಯರು, ಸಭೆಯಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಲು ಮುರುಳಿ ಹೆಗಡೆ ಕೋರಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಅಪರ್ಣಾ ಮಾರುತಿ ಭಟ್, ನಿರ್ದೇಶಕ ಅನಿತಾ ರಾಘವೇಂದ್ರ ಹೆಗಡೆ, ರಾಜೇಂದ್ರ ಜಿ.ಬದ್ದಿ, ನಾಗೇಶ ಮನೋಹರ ದೇವಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಉಮೇಶ ಜಿ.ಭಾಗ್ವತ ಪತ್ರಿಕಾಗೋಷ್ಠಿಯಲ್ಲಿದ್ದರು.