Slide
Slide
Slide
previous arrow
next arrow

ಮೈದಾನದುದ್ದಕ್ಕೂ ತ್ಯಾಜ್ಯಗಳ ರಾಶಿ: ಸಂಘಟಕರ ವಿರುದ್ಧ ಆಕ್ರೋಶ

300x250 AD

ಕುಮಟಾ: ತಾಲೂಕಿನ ಕಡ್ಲೆ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿದ ಬಳಿಕ ಮೈದಾನದುದ್ದಕ್ಕೂ ತ್ಯಾಜ್ಯಗಳ ರಾಶಿಗಳಿಂದ ತುಂಬಿದ್ದು, ಕ್ರೀಡಾಕೂಟ ಆಯೋಜಿಸಿದ್ದ ಸಂಘಟಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುವಂತಾಯಿತು.

ಸರ್ಕಾರ ಒಂದು ಕಡೆ ಇಲಾಖಾ ಅಧಿಕಾರಿಗಳ ಮೂಲಕ ಸ್ವಚ್ಛತಾ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರೆ, ಇನ್ನೊಂದು ಕಡೆ ಸರ್ಕಾರಿ ಇಲಾಖೆಗಳಿಂದಲೇ ಸಂಘಟಿಸಲಾಗುವ ಕ್ರೀಡಾಕೂಟಗಳ ಬಳಿಕ ಕ್ರೀಡಾಂಗಣದಲ್ಲಿ ರಾಶಿ ರಾಶಿ ಕಸಗಳು ಬಿದ್ದಿದ್ದರೂ ಅವುಗಳನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ವಹಿಸಲಾಗುತ್ತದೆ. ಅಂತಹ ಅಪವಾದಕ್ಕೆ ಕುಮಟಾ ತಾಲೂಕು ಪಂಚಾಯತ್ ಕೂಡ ಗುರಿಯಾಗಿದೆ. ಸೆ.15ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಕಡ್ಲೆ ಮೈದಾನದಲ್ಲಿ ಸಂಘಟಿಸಿದ ತಾಲೂಕು ಪಂಚಾಯತ್ ಕ್ರೀಡಾಕೂಟ ಮುಗಿದ ಬಳಿಕ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದೆ ನಿರ್ಲಕ್ಷಿಸಿದೆ. ಮೈದಾನದುದ್ದಕ್ಕೂ ಕಸಗಳ ರಾಶಿ ತುಂಬಿಕೊಂಡಿದೆ.

ಸ್ವಚ್ಛ ಪರಿಸರ ಮತ್ತು ಪ್ರಶಾಂತ ವಾತಾವರಣವಿರುವ ಕಡ್ಲೆ ಮೈದಾನದಲ್ಲಿ ಪ್ರತಿನಿತ್ಯ ಬೆಳಗ್ಗೆ, ಸಂಜೆ ಸಮಯದಲ್ಲಿ ವಾಯು ವಿಹಾರ ಮತ್ತು ವ್ಯಾಯಾಮಕ್ಕಾಗಿ ಬರುವ ಸ್ಥಳೀಯರು ಮೈದಾನದಲ್ಲಿ ತ್ಯಾಜ್ಯಗಳ ರಾಶಿ ನೋಡಿ ಹೌಹಾರಿದ್ದಾರೆ. ಸ್ವಚ್ಛತೆಯ ಬಗ್ಗೆ ಪಾಠ ಮಾಡುವ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಕ್ರೀಡಾಕೂಟದ ಬಳಿಕ ಮೈದಾನವನ್ನು ಸ್ವಚ್ಛಗೊಳಿಸುವ ಅಲ್ಪ ಪ್ರಜ್ಞೆಯೂ ಇಲ್ಲದೇ ಹೋಯಿತೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ತಾಲೂಕು ಆಡಳಿತದ ಅಧಿಕಾರಿಗಳಿಗೆ ಕ್ರೀಡಾಕೂಡ ನಡೆಸಿದ ಬಳಿಕ ಕಸಗಳ ರಾಶಿಯಿಂದ ಗಲೀಜ್ ಆದ ಕಡ್ಲೆ ಮೈದಾನವನ್ನು ಸ್ವಚ್ಛಗೊಳಿಸದೇ ಇರುವುದು ಅಸಮರ್ಪಕ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದಾರೆ.

300x250 AD

ಬಳಿಕ ಸ್ವಚ್ಛತೆಯ ಬಗ್ಗೆ ಅರಿವಿರುವ ಸಾಮಾಜಿಕ ಕಾರ್ಯಕರ್ತ ಬಾಬು ನಾಯ್ಕ ಅವರು ಕಡ್ಲೆ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ. ಬಾಬು ನಾಯ್ಕರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Share This
300x250 AD
300x250 AD
300x250 AD
Back to top