ಶಿರಸಿ: ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲೆ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆ ಬಹುಮಾನಗಳ ರಾಶಿ ಬಾಚಿಕೊಂಡಿದ್ದು ಒಟ್ಟಾರೆ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಬಾಲಕರ ವಿಭಾಗದಲ್ಲಿ ಖೋ-ಖೋ, ವಾಲಿಬಾಲ್, ಕಬಡ್ಡಿ ಹಾಗೂ ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ ಸ್ಥಾನ ಪಡೆದಿವೆ.
ಬಾಲಕಿಯರ ಖೋ-ಖೋ, ಕಬಡ್ಡಿ ಎರಡನೇ ಸ್ಥಾನ ಪಡೆದಿವೆ. ವೈಯಕ್ತಿಕ ವಿಭಾಗದಲ್ಲಿ ಭಾವನಾ ಜಿ. ಹೆಗಡೆ 100 ಮೀಟರ್ , 200 ಮೀಟರ್ ಪ್ರಥಮ, ಸ್ಮಿತಾ ಗೌಡ 400 ಮೀಟರ್ ದ್ವಿತೀಯ, ನಾಗಶ್ರೀ ದೇವಾಡಿಗ, 800 ಮೀಟರ್, 3000 ಮೀಟರ ಓಟದಲ್ಲಿ ಪ್ರಥಮ, ನಿಸರ್ಗ 800 ಮೀಟರ್, 3000 ಮೀಟರ್ ದ್ವಿತೀಯ, ನಾಗವೇಣಿ ಎತ್ತರ ಜಿಗಿತ ಪ್ರಥಮ, ಗಗನ ದೇವಾಡಿಗ 800 ಮೀಟರ್ ದ್ವಿತೀಯ , ಉತ್ತಮ್ 3000 ಮೀಟರ್ ದ್ವಿತೀಯ ಕಾರ್ತಿಕ ಪೂಜೆ ಜಾವೆಲಿನ್ ಪ್ರಥಮ, ಚಿನ್ಮಯ್ ಜೋಗಳೇಕರ್ ಶಾಟ್ ಪುಟ್ ಪ್ರಥಮ, ಪಾಂಡವ ಡಿಸ್ಕಸ್ ಥ್ರೋ ಪ್ರಥಮ, ವರುಣ್ ಮಡಿವಾಳ್ ಹ್ಯಾಮರ್ ಥ್ರೋ ಪ್ರಥಮ, ಭರತ್ ಪೋಲ್ ವಾಲ್ಟ್ ದ್ವಿತೀಯ, ಬಾಲಕರ ರಿಲೇಯಲ್ಲಿ ಅಬ್ದುಲ್, ಸಾಯಿನಾಥ್ ,ಚಿನ್ಮಯ್ ಹಾಗೂ ಸುಕಾಂತ್ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ರೀಲೆಯಲ್ಲಿ ಸ್ಮಿತಾ, ರಕ್ಷಾ ,ಅಕ್ಷತಾ, ಭಾವನಾ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದಕ್ಷ, ಕ್ಷಿತಿಜ್, ಪರಾಶರ, ದರ್ಶನ್ ,ತುಷಾರ್ ಪ್ರಥಮ ಸ್ಥಾನ, ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ನಲ್ಲಿ ರಕ್ಷಾ, ನೇಹಾ ,ಶರಣ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.
ಚೆಸ್ ನಲ್ಲಿ ಭುವನ್ ಭಟ್ ಪ್ರಥಮ , ಈಶಾನ್ ನಾಲ್ಕನೇ ಸ್ಥಾನ, ಬಾಲಕಿಯರ ಯೋಗದಲ್ಲಿ ಸಿಂಚನಾ ಪಂಡಿತ್ ಪ್ರಥಮ ಪಡೆದಿದ್ದಾರೆ.
ಯೋಗದಲ್ಲಿ ಹುಡುಗರ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ರಜತ್, ಲಖನ್ ಸಂಕೇತ್ ಕಾಮತ್ , ರತನ್ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟದ ವೈಯಕ್ತಿಕ ಚಾಂಪಿಯನ್ ವೈಯಕ್ತಿಕ ವಿರಾಗ್ರಣಿಯನ್ನು ಭಾವನಾ ಹೆಗಡೆ, ನಾಗಶ್ರೀ ದೇವಾಡಿಗ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ್ ಶಿರಹಟ್ಟಿ, ಯಮುನಾ ನಾಯಕ್, ಎ ಪಿ.ಶ್ರೀನಿವಾಸ್ ಹರ್ಷ ವ್ಯಕ್ತಪಡಿಸಿದರು. ಶಾಲೆಯ ಎಲ್ಲಾ ಶಿಕ್ಷಕರು , ಮುಖ್ಯ ಶಿಕ್ಷಕ ರಾಜೇಶ್ ವಿ ನಾಯ್ಕ ಹಾಗೂ ಎಸ್ ಡಿ ಎಂ ಸಿ ಸದಸ್ಯರು ವಿಜೇತರನ್ನು ಅಭಿನಂದಿಸಿದರು.