ಯಲ್ಲಾಪುರ : ಹಿಂದಿ ದಿವಸ ಆಚರಣೆಯ ನಿರ್ಧಾರ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ತಾಲೂಕು ಘಟಕದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸೆ.14 ರಂದು ಹಿಂದಿ ದಿವಸ ಆಚರಣೆ ಮಾಡಿರುವುದು, ಹಿಂದಿ ಭಾಷೆಗೆ ವಿಶೇಷ ಮನ್ನಣೆ ನೀಡಿರುವುದು ಇತರ ಭಾಷೆಗಳಿಗೆ ಅವಮಾನ ಮಾಡಿದಂತಾಗಿದೆ. ಹಿಂದಿ ಹೇರಿಕೆಯ ಈ ಕ್ರಮವನ್ನು ಪಕ್ಷ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಹಿಂದಿ ದಿವಸ ಆಚರಣೆ ಕೈ ಬಿಡಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡಬೇಕೆಂದು ಒತ್ತಾಯಿಸಿದರು. ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಮನವಿ ಸ್ವೀಕರಿಸಿ ರವಾನಿಸುವ ಭರವಸೆಯನ್ನು ನೀಡಿದರು.
ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ನಾಗೇಶ ನಾಯ್ಕ ಕಾಗಾಲ, ತಾಲೂಕು ಅಧ್ಯಕ್ಷ ಬೆನಿತ್ ಸಿದ್ದಿ, ಪ್ರಮುಖರಾದ ಶೇಖರ ನಾಯ್ಕ, ಜಾನ್ ಕೋಸ್ತಾ ಸಿದ್ದಿ, ಅನಂತ ಸಿದ್ದಿ, ದೇವರಾಜ ನಾಯ್ಕ, ಫ್ರಾನ್ಸಿಸ್ ಸಿದ್ದಿ, ಪ್ರಕಾಶ ಕಣ್ಣಿಗೇರಿ, ದಾಮೋದರ ಇತರರಿದ್ದರು.