ಶಿರಸಿ: ಹಾರ್ಮೋನಿಯಂನಲ್ಲಿ ನಗರದ ಕೆಎಸ್ಎಸ್ ರಸ್ತೆ ನಿವಾಸಿ ಪುಟಾಣಿ ಅದ್ವೈತ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆಯನ್ನ ಮಾಡಿದ್ದಾನೆ.
ನಗರದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಂಟು ವರ್ಷದ ಪುಟಾಣಿ ಅದ್ವೈತ್ 1 ಘಂಟೆ 8 ನಿಮಿಷದಲ್ಲಿ 75 ಬಾರಿ ರಾಷ್ಟ್ರಗೀತೆಯನ್ನ ಬಾರಿಸುವ ಮೂಲಕ ದಾಖಲೆಯನ್ನ ಬರೆದಿದ್ದಾನೆ. ಅದ್ವೈತ್ ಸ್ಕೇಟಿಂಗ್ ಅಕಾಡೆಮಿ ಹಾಗೂ ಪಯಣ ಟೂರಿಸಂ ಸಂಸ್ಥಾಪಕ ಕಿರಣ್ಕುಮಾರ್ ಕುಡಾಳಕರ್ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆಯ ನಿರೀಕ್ಷಕಿ ನಿಶಾ ಕುಡಾಳಕರ್ ಅವರ ಪುತ್ರನಾಗಿರುವ ಅದ್ವೈತ್ ಈ ಹಿಂದೆ ಸ್ಕೇಟಿಂಗ್ನಲ್ಲಿ ಕಾರವಾರದಿಂದ ಬೆಂಗಳೂರಿನವರೆಗೆ ಹೋಗುವ ಮೂಲಕ ಸಾಧನೆಯನ್ನ ಮಾಡಿದ್ದನು.
ಇದೀಗ ಹಾರ್ಮೋನಿಯಂನಲ್ಲಿ ಏಷಿಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆಯನ್ನ ಮಾಡಿದ್ದು, ಪುಟಾಣಿಯ ಸಾಧನೆಗೆ ಇಡೀ ಕುಟುಂಬ ಮೆಚ್ಚುಗೆಯನ್ನ ವ್ಯಕ್ತಪಡಿಸಿದೆ.