ಸಿದ್ದಾಪುರ: ಸಂಘವು ಹಲವು ಸಂಕಷ್ಟಗಳನ್ನು ದಾಟಿ ಈಗ ಆರ್ಥಿಕವಾಗಿ ಬಲಗೊಳ್ಳುತ್ತ ಲಾಭಗಳಿಸುತ್ತಿದೆ. 2021-22ನೇ ಸಾಲಿನಲ್ಲಿ ಸಂಘವು 6.74 ಲಕ್ಷ ರೂ.ಗಳಷ್ಟು ನಿವ್ವಳ ಲಾಭ ಹೊಂದಿದೆ ಎಂದು ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಹೇಳಿದರು.
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ 79ನೇ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.ಸಂಘದ ಅಭಿವೃದ್ಧಿಯಲ್ಲಿ ಸಂಘದ ಸದಸ್ಯರ ಪ್ರಾಮಾಣಿಕ ವ್ಯವಹಾರ ಹಾಗೂ ಸಿಬ್ಬಂದಿಗಳ ಸೇವೆ ಮುಖ್ಯವಾಗಿದೆ. ಸಂಘದ ಪ್ರತಿಯೊಬ್ಬ ಸದಸ್ಯರೂ ಸಂಘದ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳಬೇಕು ಹಾಗೂ ತಾವು ಬೆಳೆದ ಮಹಸೂಲನ್ನು ಸಂಘದ ಮೂಲಕವೇ ವಿಕ್ರಯಿಸುವಂತೆ ಹೇಳಿದರು. ನಂತರ ಸಂಘದ ಅಭಿವೃದ್ಧಿ ಹಾಗೂ ನೂತನ ಕಟ್ಟಡ ನಿರ್ಮಾಣದ ಕುರಿತು ಚರ್ಚೆ ಚರ್ಚೆ ನಡೆಯಿತು.
ಇದೇ ಸಂದರ್ಭದಲ್ಲಿ ಸಂಘದ ಮೂಲಕ ಹೆಚ್ಚು ಮಹಸೂಲು ವಿಕ್ರಿಮಾಡಿದ ಅನಂತ ಹೆಗಡೆ ಗೊಂಟನಾಳ, ಪ್ರಸನ್ನ ಹೆಗಡೆ ಹೊಸಗದ್ದೆ ಹಾಗೂ ಅನಂತ ಹೆಗಡೆ ಹೊಸಗದ್ದೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಕೆ.ಹೆಗಡೆ ಚಳ್ಳೆಹದ್ದ ಹಾಗೂ ಅಕೌಂಟಂಟ್ ಮಹ್ಮದ್ ಗುಲ್ಜಾರ ಸಾಬ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷೆ ಇಂದಿರಾ ಜಿ.ಹೆಗಡೆ ಹಾರ್ಸಿಕಟ್ಟಾ, ನಿರ್ದೇಶಕರಾದ ಅಶೋಕ ಜಿ.ಹೆಗಡೆ ಹಿರೇಕೈ, ಅಶೋಕ ಆರ್.ಹೆಗಡೆ ಹೀನಗಾರ, ನಾಗರಾಜ ಎಸ್.ಹೆಗಡೆ ಹುಲಿಮನೆ, ಮಂಜುನಾಥ ಕೆ.ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಎಚ್. ಗೌಡ ಮಾದ್ಲಮನೆ, ಸುಮಾ ಎಂ.ಹೆಗಡೆ ಹೊನ್ನೆಹದ್ದ, ನಾಗರಾಜ ಬಿ.ಹೆಗಡೆ ಹೊಲಗದ್ದೆ, ಸುಧಾಕರ ಜಿ. ಹರಿಜನ ಹೊನ್ನೆಹದ್ದ ಉಪಸ್ಥಿತರಿದ್ದರು.
ನಿರ್ದೇಶಕರಾದ ಅನಂತ ಹೆಗಡೆ ಗೊಂಟನಾಳ, ಅನಂತ ಹೆಗಡೆ ಹೊಸಗದ್ದೆ ನಿರ್ವಹಿಸಿದರು.