ಶಿರಸಿ: ಶಿರಸಿಯ ಟಿ.ಎಸ್.ಎಸ್.ನಲ್ಲಿ ಈಗಾಗಲೇ ಮಳೆಗಾಲದ ಹಸಿ ಅಡಿಕೆ ವ್ಯಾಪಾರವನ್ನು ಆರಂಭಿಸಿ ಪ್ರತಿದಿನ ನಡೆಸಲಾಗುತ್ತಿದೆ. ಈ ವರ್ಷದಲ್ಲಿ ಕೊಳೆ ರೋಗವು ತೀವ್ರ ಪ್ರಮಾಣದಲ್ಲಿಇರುವುದರಿಂದ ಪ್ರತಿದಿನ ಸರಾಸರಿ 200 ರಿಂದ 250 ಕ್ವಿಂಟಲ್‌ಗಳಷ್ಟು ಹಸಿ ಅಡಿಕೆಯು ವ್ಯಾಪಾರವಾಗುತ್ತಿದ್ದು ರೈತರಿಗೆ ಒಳ್ಳೆಯ ದರವೂ ಕೂಡ ಲಭ್ಯವಾಗುತ್ತಿದೆ. ರೈತರ ಅನುಕೂಲಕ್ಕಾಗಿ ಸಂಘವು ಪ್ರತಿದಿನವೂ ಸಹ ಹಸಿ ಅಡಿಕೆ ವ್ಯಾಪಾರವನ್ನು ಪ್ರಾರಂಭಿಸಿರುವುದರಿಂದ ರೈತರು ತೋಟದಲ್ಲಿ ಬಿದ್ದ ಯಾವುದೇ ತರಹದ ಅಡಿಕೆಯಾದರೂ ವ್ಯಾಪಾರಕ್ಕೆ ತರಬಹುದಾಗಿದೆ. ದಾಸನಕೊಪ್ಪದಲ್ಲಿರುವ ಸಂಘದ ಜಾಗದಲ್ಲಿ ಸೆ.19ರಿಂದ ಹಸಿ ಅಡಿಕೆ ಟೆಂಡರ್ ಪ್ರಾರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.