ಶಿರಸಿ: ತಾಲೂಕಿನ ನಿರ್ನಳ್ಳಿಯ ಆದರ್ಶ ಮಹಿಳೆ ವೇದಾ ಹೆಗಡೆ ಇತ್ತೀಚಿಗೆ ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ರಾಜ್ಯಮಟ್ಟದ ವೇದಮಾತಾ ಗಾಯತ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವೇದಾರವರು ಸಂಸಾರದ ನಿರ್ವಹಣೆಯ ಜೊತೆಗೆ ತಮ್ಮ ಪತಿಯವರ ಪ್ರೋತ್ಸಾಹದೊಂದಿಗೆ ಪ್ರಗತಿಪರ ವ್ಯವಸಾಯದಲ್ಲಿ ಆಸಕ್ತಿ ಬೆಳೆಸಿಕೊಂಡರು. ತಮ್ಮ 20 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ಯಾಲಕ್ಕಿ, ಕಾಫಿ, ಹಲಸು, ಮಾವು, ಸಪೋಟಾ, ಲಿಂಬೆ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ. ರಾಸಾಯನಿಕ ಗೊಬ್ಬರ ಕ್ರಿಮಿನಾಶಕಗಳನ್ನು ಬಳಸದೇ ಕೊಟ್ಟಿಗೆ ಗೊಬ್ಬರ ಹಾಕಿ ನೈಸರ್ಗಿಕ ವಿಧಾನದಲ್ಲಿ ಪರಿಸರ ಸ್ನೇಹಿತವಾದ ವಸ್ತುಗಳನ್ನು ಮಾತ್ರ ಬಳಸಿರುವುದು ಇವರ ಹೆಗ್ಗಳಿಕೆಯಾಗಿದೆ.