• Slide
  Slide
  Slide
  previous arrow
  next arrow
 • ಕೋಗಿಲಬನದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ

  300x250 AD

  ದಾಂಡೇಲಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಳಿಯಾಳ, ಸಮೂಹ ಸಂಪನ್ಮೂಲ ಕೇಂದ್ರ ಕೋಗಿಲಬನ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಉರ್ದು ಬಂಗೂರನಗರ ಇವರ ಸಂಯುಕ್ತಾಶ್ರಯದಲ್ಲಿ ಕೋಗಿಲಬನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆಯನ್ನು ನೀಡಲಾಯಿತು.

  ಕಾರ್ಯಕ್ರಮವನ್ನು ಕೋಗಿಲಬನ/ಬಡಕಾನಶಿರಡಾ ಗ್ರಾಮ ಪಂಚಾಯ್ತು ಅಧ್ಯಕ್ಷ ಅಶೋಕ ನಾಯ್ಕ ಅವರು ಉದ್ಘಾಟಿಸಿ, ಮಕ್ಕಳ ಪ್ರತಿಭೆಗಳನ್ನು ಅರಳಿಸಿ, ಬೆಳಗಿಸುವ ಕರ‍್ಯಕ್ರಮವಾಗಿ ಪ್ರತಿಭಾ ಕಾರಂಜಿ ಮೂಡಿಬರಲೆಂದು ಶುಭ ಹಾರೈಸಿದರು.

  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎನ್.ಜಯಚಂದ್ರನ್ ಅವರು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಮುಖ್ಯಭೂಮಿಕೆಗೆ ತರಲು ಪ್ರತಿಭಾ ಕಾರಂಜಿ ಮಹತ್ವಪೂರ್ಣವಾದ ವೇದಿಕೆಯಾಗಿದೆ. ಇಂದು ಶೈಕ್ಷಣಿಕ ಕ್ಷೇತ್ರ ಬಹಳಷ್ಟು ಮುಂದುವರಿದಿದೆ. ಈಗಿನ ಪರಿಸ್ಥಿತಿ ಹಾಗೂ ಮುಂದಿನ ಶೈಕ್ಷಣಿಕ ಕ್ಷೇತ್ರದ ಸದೃಢತೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು ಶಿಕ್ಷಣವಂತ ಮಗು ದೇಶದ ಆಸ್ತಿಯಾಗಬಲ್ಲದು. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.

  300x250 AD

  ಮುಖ್ಯ ಅತಿಥಿಗಳಾಗಿ ಹಳೆದಾಂಡೇಲಿ ಸರಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಅಬ್ದುಲ್ ರೆಹಮಾನ್ ಅವರು ಪ್ರತಿಭಾ ಕಾರಂಜಿ ಕರ‍್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಗ್ರಾಮ ಪಂಚಾಯ್ತು ಉಪಾಧ್ಯಕ್ಷೆ ಪಾರ್ವತಿ ಹರಿಜನ, ಗ್ರಾಮ ಪಂಚಾಯ್ತು ಸದಸ್ಯ ರಮೇಶ ನಾಯ್ಕ, ಪ್ರಮುಖರುಗಳಾದ ಚೆನ್ನಬಸಪ್ಪ ಮುರುಗೋಡ, ಅಮೀನ್ ಶಂಸೇರ್, ರಿಯಾಜ್ ಚೌಕಡಾತ್, ರೇಣುಕಾ ಶಿಂಗೆ, ವಿಜಯಲಕ್ಷ್ಮಿ ಮುರಿಗೇಶ, ನಿವೃತ್ತ ಶಿಕ್ಷಕರುಗಳಾದ ಶಾಂತಾ ನಾಯಕ, ಸೀಮಾ ಕೇಣಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಸುರೇಶ ನಾಯ್ಕ, ಅರಣ್ಯ ಇಲಾಖೆಯ ರಾಮು ಗೌಡ, ಸಿ.ಆರ್.ಪಿಗಳಾದ ಶ್ರೀದೇವಿ, ಮುಖ್ಯ ಶಿಕ್ಷಕಿ ಮಾಯಾ ರಾಣೆ, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

  ಶಿಕ್ಷಕರುಗಳಾದ ನಾಗರಾಜ ನಾಯ್ಕ ಸ್ವಾಗತಿಸಿದ ಕರ‍್ಯಕ್ರಮಕ್ಕೆ ರವಿಚಂದ್ರ ಸುತಾರ್ ವಂದಿಸಿದರು. ಸಿ.ಆರ್.ಪಿ ಲಲಿತಾ ಗೌಡ ಕಾರ್ಯಕ್ರಮ ನಿರೂಪಿಸಿದರು. ಕೋಗಿಲಬನ ಕ್ಲಸ್ಟರ್ ವ್ಯಾಪ್ತಿಯ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top