Slide
Slide
Slide
previous arrow
next arrow

ಪ್ರತಿಭೆಯ ಅನಾವರಣಕ್ಕೆ ಪ್ರತಿಭಾಕಾರಂಜಿ ಉತ್ತಮ ವೇದಿಕೆ: ಜಿ.ಐ.ನಾಯ್ಕ

300x250 AD

ಸಿದ್ದಾಪುರ: 2022-23ನೇ ಸಾಲಿನ ಸಿದ್ದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಹೊಸೂರಿನ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಅಕ್ಷರ ದಾಸೋಹ ಜಿಲ್ಲಾ ನೋಡೆಲ್ ಅಧಿಕಾರಿ ಜಿ.ಐ.ನಾಯ್ಕ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಒಂದು ಉತ್ತಮ ವೇದಿಕೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಹಚ್ಚುಕಟ್ಟಾಗಿ ಸಂಘಟಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ನಾಯ್ಕ ತಮ್ಮ ಶಾಲೆಯಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭಹಾರೈಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯ ಶಿಕ್ಷಕಿ ಶೋಭಾ ಪಾಲನಕರ್ ಇವರು ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಿದ್ದರು. ಭರತ್ ನಾಯ್ಕ ಹೊಸೂರು ಸಹಕಾರ ನೀಡಿದ್ದರು. ಬಹುಮಾನದ ಪ್ರಾಯೋಜಕತ್ವವನ್ನು ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಭಟ್ ವಹಿಸಿದ್ದರು. ಇದೇ ವೇಳೆ ಜಿ.ಐ.ನಾಯ್ಕ ಅವರಿಗೆ ಸನ್ಮಾನಿಸಲಾಯಿತು.

300x250 AD

ಕಾರ್ಯಕ್ರಮವನ್ನು ಪೂರ್ಣಿಮಾ ಭಟ್ಟ ನಿರ್ವಹಿಸಿದರು. ಸಿದ್ದಾಪುರ ಕ್ಲಸ್ಟರ್ ಸಿ.ಆರ್.ಪಿ ಶೋಭಾ ಡಿ.ಸಿ. ಸ್ವಾಗತಿಸಿದರು. ಕವಿತಾ ಶೇಟ್ ವಂದಿಸಿದರು. ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ಉಪಾಧ್ಯಕ್ಷೆ ಮಂಜುಳಾ ಪಟಗಾರ, ಇಸಿಓ ಮಹೇಶ ಹೆಗಡೆ, ಬಿಆರ್’ಪಿಗಳು ಭೇಟಿ ನೀಡಿ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಕ.ರಾ.ಪ್ರಾ.ಶಾ.ಶಿ.ಸಂಘದ ಸದಸ್ಯ ಜಿ.ಜಿ.ಹೆಗಡೆ, ನಾಮ ನಿರ್ದೇಶಕ ಸದಸ್ಯೆ ಸುಜಾತ ಎಲ್. ಶಾಲೆಯ ಮುಖ್ಯ ಶಿಕ್ಷಕ ಗಣಪತಿ ಎಂ.ಗೊAಡ, ಎಸ್‌ಡಿಎಂಸಿ ಸದಸ್ಯರಾದ ಬೊಮ್ಮ ನಾಯ್ಕ, ಜಗದೀಶ್ ಎಂ.ಮಡಿವಾಳ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top