Slide
Slide
Slide
previous arrow
next arrow

ಶಿಕ್ಷಕಿ ದೇವದಿತ್ ರೀಟಾಗೆ ಸೇವಾ ನಿವೃತ್ತಿ

300x250 AD

ದಾಂಡೇಲಿ: ಇಲ್ಲಿನ ಜನತಾ ಪ್ರೌಢಶಾಲೆಯ ಗಣಿತ ಶಿಕ್ಷಕಿ ದೇವದಿತ್ ರೀಟಾ ಎಂ.ಡಾಯಸ್ ಕಳೆದ ಮೂವತ್ತೆಂಟು ವರ್ಷಗಳ ಅನುಪಮ ಸೇವೆ ಸಲ್ಲಿಸಿ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಬಳಗವನ್ನು ಹೊಂದಿ ಇದೀಗ ತಮ್ಮ ಶೈಕ್ಷಣಿಕ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಜನತಾ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ 1984ರ ಡಿ.04ರಲ್ಲಿ ಸೇವೆಗೆ ಸೇರಿಕೊಂಡು, ಇಲ್ಲಿಯವರೆಗೆ ಅತ್ಯಂತ ಪ್ರಾಂಜಲ ಗುಣಮನಸ್ಸಿನಿಂದ ಶೈಕ್ಷಣಿಕ ಸೇವೆಯನ್ನು ಸಲ್ಲಿಸಿ ದಾಂಡೇಲಿಗರ ನಲುಮೆ, ಒಲುಮೆಗೆ ಪಾತ್ರರಾಗಿದ್ದಾರೆ. ಬುದ್ಧಿವಂತರನ್ನು ಬುದ್ದಿವಂತರನ್ನಾಗಿಸುವುದು ದೊಡ್ಡ ಸಾಧನೆಯಲ್ಲ. ಏನು ತಿಳಿಯದ, ಏನು ಅರಿಯದ, ಕಲಿಕೆಯಲ್ಲಿ ತೀರಾ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಅವರ ಮನವೊಲಿಸಿ, ಅವರನ್ನು ಕಲಿಕೆಯಲ್ಲಿ ಮುಂಚೂಣಿಗೆ ತರುವುದೇ ನಿಜವಾದ ಸಾಧನೆ. ಇಂತಹ ಸಹಸ್ರ ಸಹಸ್ರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನೆ ಉನ್ನತಿಯೆಡೆಗೆ ಕೊಂಡೊಯ್ದ ಛಲದಂಕ ಮಲ್ಲರಾಗಿ ಅಭೂತಪೂರ್ವ ಕೆಲಸ ಮಾಡಿದವರು ದೇವದಿತ್ ರೀಟಾ ಅವರು.
ವೃತ್ತಿ ಬದುಕಿನಲ್ಲಿ ಎಲ್ಲಿಯೂ ಕಪ್ಪು ಚುಕ್ಕೆಯಿಲ್ಲದೇ, ಅತ್ಯುತ್ತಮ ಶಿಕ್ಷಕಿಯಾಗಿ, ತನ್ನ ಕಲಿಕೆಯ ಉತ್ಕೃಷ್ಟ ಗುಣಮಟ್ಟದ ಮೂಲಕವೆ ಕಲಿಸುತ್ತಿರುವ ಶಿಕ್ಷಣ ಸಂಸ್ಥೆಗೂ ಅಗ್ರ ಹೆಸರು ಬರುವಲ್ಲಿ ದೇವದಿತ್ ರೀಟಾ ಡಾಯಸ್ ಅವರ ಶ್ರಮ ಸ್ಮರಣೀಯ.
ಅತ್ಯುತ್ತಮ ಬೋಧನಾ ಕ್ರಮ, ವಿದ್ಯಾರ್ಥಿಗಳಲ್ಲಿ ಜೀವನ ಶಿಸ್ತನ್ನು ಮೂಡಿಸುವಲ್ಲಿ ಸಮರ್ಪಣಾಭಾವದಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ದೇವದಿತ್ ರೀಟಾ ಅವರಿಗೆ ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ರೋಟರಿ ಕ್ಲಬ್ ನೀಡುವ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ರಾಜ್ಯ ಮಟ್ಟದ ಶಿಕ್ಷಣ ಸಿರಿ ಹೀಗೆ ಇನ್ನೂ ಹತ್ತು ಹಲವು ಪ್ರಶಸ್ತಿ, ಸನ್ಮಾನಗಳು ಅವರ ಹೆಗಲೇರಿವೆ. ದಾಂಡೇಲಿ, ತಾಲೂಕು, ಜಿಲ್ಲೆ, ರಾಜ್ಯ, ಹೊರ ರಾಜ್ಯ ಮತ್ತು ದೇಶ, ವಿದೇಶಗಳಲ್ಲಿ ಇರುವ ಅಸಂಖ್ಯಾತ ವಿದ್ಯಾರ್ಥಿಗಳ ಅಪ್ಪುಗೆಯ ಪ್ರೀತಿಯೇ ದೇವದಿತ್ ರೀಟಾ ಡಾಯಸ್ ಅವರ ಮುಂದಿನ ನಿವೃತ್ತ ಜೀವನಕ್ಕೆ ಶ್ರೀರಕ್ಷೆ.

300x250 AD
Share This
300x250 AD
300x250 AD
300x250 AD
Back to top