ಶಿರಸಿ;ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ತಾಲೂಕಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಿರಸಿ ಹಾಗೂ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಆ .22 ಮತ್ತು 24 ರಂದು ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ನಗರಪೂರ್ವ ವಲಯಮಟ್ಟದ ಕ್ರೀಡಾಕೂಟದಲ್ಲಿ ನಗರದ ಲಯನ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವೈಯಕ್ತಿಕ ಕ್ರೀಡೆಗಳಲ್ಲಿ ತನುಶ್ರೀ ಟಿ. (ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ದ್ವಿತೀಯ, 100 ಮೀ ಓಟ ದ್ವಿತೀಯ), ಅಥರ್ವ ನಾಯ್ಕ (ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ), ಸ್ಕಂದ ಶಟ್ಟಿ (100 ಮೀ ಓಟ ದ್ವಿತೀಯ), ಯೋಗಿತಾ ಮೋದಿ (ಹರ್ಡಲ್ಸ್ 400 ಮೀ ದ್ವಿತೀಯ), ಸಾಜಿದ್ ಸುಂಠಿ (ಹರ್ಡಲ್ಸ್ 400 ಮೀ ತೃತೀಯ), ಅನುಶ್ರೀ ಶೇಟ್ (ಹರ್ಡಲ್ಸ್ 400 ಮೀ ತೃತೀಯ, ಎತ್ತರ ಜಿಗಿತ ತೃತೀಯ), ಪ್ರೀತಮ್ ವೈದ್ಯ (ಚದುರಂಗ ದ್ವಿತೀಯ, ಎತ್ತರ ಜಿಗಿತ ತೃತೀಯ), ಸ್ಥಾನಗಳನ್ನು ಪಡೆದು ಹಾಗೂ ಗುಂಪು ಕ್ರೀಡೆಯಲ್ಲಿ ಹುಡುಗಿಯರ (ವಾಲಿಬಾಲ್- ಪ್ರಥಮ, ಥ್ರೋಬಾಲ್- ಪ್ರಥಮ, ಕಬ್ಬಡಿ-ದ್ವಿತೀಯ, ಹಾಗೂ ಹುಡುಗರ ಗುಂಪು ಕ್ರೀಡೆಯಲ್ಲಿ (ಥ್ರೋಬಾಲ್- ಪ್ರಥಮ, ವಾಲಿಬಾಲ್- ದ್ವಿತೀಯ), ಹೀಗೆ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಮೆಡಲ್ ತಮ್ಮದಾಗಿಸಿಕೊಂಡು ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಹಾಗೂ ತಾಲೂಕಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕಿಯಾದದ ಶ್ರೀಮತಿ ಚೇತನಾ ಪಾವಸ್ಕರ್ ಇವರು ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.