• Slide
    Slide
    Slide
    previous arrow
    next arrow
  • ಕ್ರೀಡಾಕೂಟ: ತ್ಯಾಗಲಿ ಶಾಲೆಗೆ ಸಮಗ್ರ ವೀರಾಗ್ರಣಿ

    300x250 AD

    ಸಿದ್ದಾಪುರ: ತಾಲೂಕಿನ ಕಾನಸೂರು ಕಾಳಿಕಾ ಭವಾನಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ನಡೆದ 2022-23ನೇ ಸಾಲಿನ ಕಾನಸೂರು ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ತ್ಯಾಗಲಿ ಸ.ಹಿ.ಪ್ರಾ.ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
    ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಕ್ರೀಡಾಕೂಟದಲ್ಲಿ ತ್ಯಾಗಲಿ ಶಾಲೆಯ ಭರತಗೌಡ ಬಾಲಕರ ವಿಭಾಗದಲ್ಲಿ, ಅದೇ ಶಾಲೆಯ ನಿಖಿತಾ ನಾಯ್ಕ ಬಾಲಕಿಯರ ವಿಭಾಗದಲ್ಲಿ ವೀರಾಗ್ರಣಿಯಾಗಿ ಹೊರಹೊಮ್ಮಿದರು. ಒಟ್ಟಾರೆಯಾಗಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡು ಬೀಗಿತು. ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ ಕುರುಬರ ಅವರ ನೇತೃತ್ವದಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರದಿಂದ ಕ್ರೀಡಾಕೂಟವು ಸುಗಮವಾಗಿ ನಡೆಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top