Slide
Slide
Slide
previous arrow
next arrow

ವಿದ್ಯಾರ್ಥಿಗಳು ದೇಶಾಭಕ್ತಿ ಬೆಳೆಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಿ: ಶಾಸಕ ಶೆಟ್ಟಿ

300x250 AD

ಹೊನ್ನಾವರ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2021-22ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಆವರದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸೈನಿಕರನ್ನು ಸನ್ಮಾನಿಸಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ನಿಜಕ್ಕೂ ಭಾವುಕವಾಗುವ ಸಂದರ್ಭ. ಇಲ್ಲಿನ ವಿದ್ಯಾರ್ಥಿಗಳು ಸುಸಂಸ್ಕೃತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಂತಹ ಕಾರ್ಯ ಕಾಲೇಜಿನಿಂದ ನಡೆದಿದೆ. ಮೊಬೈಲ್‌ನಿಂದ ದುರ್ಬಳಕೆಯಾಗುವುದೇ ಹೆಚ್ಚು. ಇದರಿಂದ ದೂರ ಇದ್ದು ಓದಿನೆಡೆ ಹೆಚ್ಚಿನ ಗಮನಹರಿಸಿ. ಹೊನ್ನಾವರ ಎನ್ನುವುದು ಬುದ್ಧಿವಂತರ ನಾಡಾಗಿದೆ. ಅದಕ್ಕೆ ತಕ್ಕಂತೆ ನಿಮ್ಮ ಸಾಧನೆಯು ಇರಲಿ. ವಿದ್ಯಾರ್ಥಿಗಳು ದೇಶಾಭಿಮಾನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗುಣವಂತೆ ತಿಮ್ಮಪ್ಪ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ಇಲ್ಲಿನ ವಾತಾವರಣ ಗಮನಿಸಿದರೆ ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎನ್ನುವುದು ತಿಳಿಯುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಜಾತಿ,ಮತ ಎಂಬ ವಿರೋಧ ಭಾವಗಳು ಉದ್ಭವವಾಗುತ್ತಿದೆ. ಇಂದಿನ ಯುವಜನಾಂಗ ಇದೆಲ್ಲವನ್ನು ವಿರೋಧಿಸಿ ನಾವೆಲ್ಲಾ ಒಂದು ಎನ್ನುವ ಮೂಲಕ ರಾಷ್ಟ್ರಾಭಿಮಾನ ಹೊಂದಬೇಕು ಎಂದರು. ಅಲ್ಲದೇ ಸೈನ್ಯಕ್ಕೆ ಸೇರಲು ಕೇಂದ್ರ ಸರ್ಕಾರ ಅಗ್ನಿಪಥ್ ಎನ್ನುವ ಅವಕಾಶ ಒದಗಿಸಿದೆ ಹೆಚ್ಚಿನ ಸಂಖ್ಯೆಯ ನಮ್ಮ ತಾಲೂಕಿನವರು ಇದರಲ್ಲಿ ಭಾಗಿಯಾಗುವಂತೆ ತಿಳಿಸಿದರು.

300x250 AD

ಪಠ್ಯ, ಕ್ರೀಡೆ, ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆಯ ಮೂಲಕ ಪುರಸ್ಕರಿಸಲಾಯಿತು. ನಿವೃತ್ತ ಪ್ರಾಂಶುಪಾಲ ವಿ.ಎಸ್.ಭಟ್ ಮಾತನಾಡಿ, ಇಂದು ಸರ್ಕಾರಿ ಕಾಲೇಜಿನಲ್ಲಿ ಸಕಲ ಸೌಲಭ್ಯಗಳು ಒದಗಿದೆ. ವಿದ್ಯಾರ್ಥಿಗಳು ಇದನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಜನೆಯಲ್ಲಿ ತೊಡಗಿ ಸಾಧನೆ ಮಾಡಿ ಎಂದು ಕರೆ ನೀಡಿದರು.

ಉಪನ್ಯಾಸಕಿ ಕಾವ್ಯಶ್ರೀ ನಾಯ್ಕ ಸ್ವಾಗತಿಸಿ, ಶ್ವೇತಾ ಎಂ ವಂದಿಸಿದರು. ಸುಜಾತ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ನಾಗೇಶ ಶೆಟ್ಟಿ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್, ಸಿಡಿಸಿಸಿ ಸದಸ್ಯರಾದ ಎಂ.ಎಸ್.ಹೆಗಡೆ ಕಣ್ಣಿ, ಸುರೇಶ ಶೆಟ್ಟಿ, ಗಣೇಶ ಪೈ, ಜಯಾ ಗಡ್ಕರಿ, ಸಾಂಸ್ಕೃತಿಕ ಸಂಚಾಲಕರಾದ ಮರಿಯಾ ರೊಡ್ರಗೀಸ್, ದೈಹಿಕ ನಿರ್ದೆಶಕರಾದ ಶ್ರೀನಿವಾಸ, ವಿದ್ಯಾರ್ಥಿ ಪ್ರತಿನಿಧಿ ಸಚಿನ್ ನಾಯ್ಕ, ಭಾಗ್ಯಶ್ರೀ ಕರ್ಕಿಕರ್ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top