• Slide
  Slide
  Slide
  previous arrow
  next arrow
 • ರಸ್ತೆಯ ಇಕ್ಕೆಲಗಳಲ್ಲಿ ಲಾರಿ ಪಾರ್ಕಿಂಗ್: ವಾಹನ ಸಂಚಾರಕ್ಕೆ ತೀವ್ರ ತೊಂದರೆ

  300x250 AD

  ದಾಂಡೇಲಿ: ನಗರದ ಪ್ರಮುಖ ರಸ್ತೆ ಹಾಗೂ ನಗರವನ್ನು ಸಂಪರ್ಕಿಸುವ ಕೊಂಡಿಯಾಗಿರುವ ಹಳಿಯಾಳ ರಸ್ತೆಯ ಎರಡು ಬದಿಗಳಲ್ಲಿ ಸರತಿಯ ಸಾಲಿನಲ್ಲಿ ಲಾರಿಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

  ಈ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಓಡಾಡುತ್ತಿರುವುದರಿಂದ ಅಪಘಾತಗಳಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಇಲ್ಲಿ ಟ್ರಕ್‌ಗಳು ಪಾರ್ಕಿಂಗ್ ಮಾಡದಂತೆಯೂ ಹಾಗೂ ಟ್ರಕ್‌ಗಳ ಪಾರ್ಕಿಂಗ್ ಮಾಡಲು ಟ್ರಕ್ ಟರ್ಮಿನಲ್‌ನಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯವರು ತಮ್ಮ ಸಿಎಸ್‌ಆರ್ ಯೋಜನೆಯಡಿ ಮಾಡಿಕೊಡುವಂತೆ ಹಳಿಯಾಳ ರಸ್ತೆಯ ಶ್ರೀಗಜಾನನ ಯುವಕ ಮಂಡಳದ ಅಧ್ಯಕ್ಷರು ಹಾಗೂ ಮಾಜಿ ನಗರಸಭಾ ಸದಸ್ಯರಾದ ಉದಯ ನಾಯರ್ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top