Slide
Slide
Slide
previous arrow
next arrow

ಭಕ್ತಿಸುಧೆ ಹರಿಸಿದ ಶ್ರೀಕೃಷ್ಣ ಗಾನಾಮೃತ

300x250 AD

ಶಿರಸಿ :ನಗರದ ಟಿ.ಎಂ.ಎಸ್. ಸಭಾಭವನದಲ್ಲಿ ಶ್ರೀ ಕೃಷ್ಣ ಗಾನಾಮೃತ ಎಂಬ ಭಜನ್ ಕಾರ್ಯಕ್ರಮವು ಆ: 20 ಶನಿವಾರದಂದು ಸಂಜೆ 4.30 ರಿಂದ ಆರು ತಾಸುಗಳ ಮಿಕ್ಕಿ ಭಕ್ತಿಸುಧೆ ಹರಿಸಿತು. ಗಾಯಕಿ ವಿದೂಷಿ ಶ್ರೀಮತಿ ರೇಖಾ ದಿನೇಶ ಅವರು ರಾಗ್ ಯಮನ್‌ದಲ್ಲಿ ಶ್ರೀ ಕೃಷ್ಣನ ಕುರಿತಾದ ಸಾಹಿತ್ಯವುಳ್ಳ ಓಂ ನಮೋ ಭಗವತೇ ವಾಸುದೇವಾಯಾ ಎಂಬ ಶ್ಲೋಕದ ಸಾಲುಗಳನ್ನು ವಿಸ್ತರಿಸುತ್ತಾ ಅದೇ ರಾಗದಲ್ಲಿ ಸ್ವರಗಳ ಧುನ್‌ನೊಂದಿಗೆ ಪ್ರಸ್ತುತಪಡಿಸಿದರು. ಶ್ರೀಧರ ಮಂಗಳೂರು ಇವರ ವಿರಚಿತ ಬರದೆ ಹೋಗೆನು ಕಾಯುವೆ ನಿಲ್ಲಿ. ಎಂಬ ಕೃಷ್ಣನ ಕುರಿತಾದ ರಚನೆಯೊಂದನ್ನು ರಾಗ ಸಂಯೋಜಿಸಿ ಹಾಡುತ್ತಾ ಜೊತೆಗೆ ತುಳಸಿಯ ಕುರಿತಾದ ಪುರಂದರ ದಾಸರ ಏಳಮ್ಮ ತುಳಸಿ ಎಂಬ ದಾಸರ ಪದ ಮತ್ತು ಶ್ರೀ ಕೃಷ್ಣನ ಕುರಿತಾದ ಇನ್ನೀತರ ಭಜನೆಗಳ ಜೊತೆಗೆ ಕೊನೆಗೆ ಭೈರವಿಯಲ್ಲಿ ತರಾನಾವನ್ನು ಪ್ರಸ್ತುತ ಪಡಿಸಿದರು. ಇವರಿಗೆ ತಬಲಾದಲ್ಲಿ ಗಣೇಶ ಗುಂಡ್ಕಲ್ ಇವರು ಸಹಕಾರ ನೀಡಿದರೆ ಕೊಳಲಿನಲ್ಲಿ ಸಮರ್ಥ ಹೆಗಡೆ ತಂಗಾರಮನೆ ಇವರು ಕೊಳಲಿನಲ್ಲಿ ಸಹಕಾರ ನೀಡಿದರು.

ಕಾರ್ಯಕ್ರಮ ಪೂರ್ವದಲ್ಲಿ ಆಹ್ವಾನಿತ ಕಲಾವಿದರಾದ ಸಮರ್ಥ ಹೆಗಡೆ ತಂಗಾರಮನೆ ಇವರು ತಮ್ಮ ಕೊಳಲು ವಾದನದಲ್ಲಿ ರಾಗ್‌ಜೋಗ್‌ದಲ್ಲಿ ಪ್ರಾರಂಭಿಕವಾಗಿ ನುಡಿಸಿ ಕೊನೆಯಲ್ಲಿ ಧುನ್‌ದೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ಗಣೇಶ ಗುಂಡ್ಕಲ್ ಇವರು ಅಷ್ಟೇ ಸಮರ್ಥವಾಗಿ ಸಾಥ್ ನೀಡಿದರು. ಸಂಸ್ಥೆಯ ಹಿರಿಯ ಹಾಗೂ ಕಿರಿಯ ಕಲಾವಿದರು ಕೃಷ್ಣನ ಕುರಿತಾದ ದಾಸರ ಪದಗಳು ಪ್ರಸ್ತುತಗೊಂಡವು.

300x250 AD

ಸಂಪದಾ ವರುಣ, ಸ್ನೇಹಾ ಅಮ್ಮೀನಳ್ಳಿ, ಮಧುಶ್ರೀ ಶೆಟ್, ಧನ್ಯಾ ಹೆಗಡೆ, ಮೈತ್ರಿ ಹೆಗಡೆ, ಸ್ಪಂದನಾ ಭಟ್, ಅಮೃತಾ ಹೆಗಡೆ, ಸನ್ಮತಿ ಹೆಗಡೆ, ವಿವೇಕ ಆರ್. ಡಿ., ರೇಖಾ ಭಟ್, ಚೈತ್ರಾ ಹೆಗಡೆ, ಹಾಗೂ ವಿಜಯಾ ಹೆಗಡೆ ಇವರುಗಳಿಗೆ ತಬಲಾದಲ್ಲಿ ಸಂಕೇತ ನಾಯ್ಕ, ವಿಜೇಂದ್ರ ಹೆಗಡೆ ಅಜ್ಜಿಬಳ, ಹಾಗೂ ಶ್ರೀಮತಿ ರೇಖಾ ದಿನೇಶ ಇವರು ಕೀಬೋರ್ಡನಲ್ಲಿ ಹಾಗೂ ರಿದಮ್ ಪ್ಯಾಂಡ್ ಮತ್ತು ತಬಲಾದಲ್ಲೂ ಸಹ ಕಿರಣ ಹೆಗಡೆ ಕಾನಗೋಡ ಇವರು ಸಹಕರಿಸಿದರು.

Share This
300x250 AD
300x250 AD
300x250 AD
Back to top