Slide
Slide
Slide
previous arrow
next arrow

ಕಲಾವಿದ ಕಂಚಿಕೈ ವೆಂಕಟರಮಣ ರಾಮಚಂದ್ರ ಹೆಗಡೆ ಸಂಸ್ಮರಣೆ ಕಾರ್ಯಕ್ರಮ

300x250 AD

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಹತ್ವದ ಯೋಜನೆಯದ ಯಕ್ಷಗಾನ ವಿಶ್ವಕೋಶ ರಚನೆಯ ಕಾರ್ಯ ಪ್ರಗತಿಯಲ್ಲಿದೆ. ಎರಡು ವರ್ಷದ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ  ತಿಳಿಸಿದರು.

 ಕಂಚಿಕೈಯಲ್ಲಿ ವಸುಂಧರಾ ಸಮೂಹ ಸೇವಾ ಸಂಸ್ಥೆ ಮತ್ತು ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾವಿದ ವೆಂಕಟರಮಣ ರಾಮಚಂದ್ರ ಹೆಗಡೆ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಸರಕಾರ ಕಳೆದ ಕೆಲವು ವರ್ಷಗಳ ಈಚೆಗೆ ಯಕ್ಷಗಾನ ಕಲೆಯ ಮಹತ್ವವನ್ನು ಅರಿತು ನೆರವು ನೀಡುತ್ತಿದೆ. ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ನಡೆಸುವುದಕ್ಕೆ ಬಜೆಟ್ ನಲ್ಲಿ ಎರಡು ಕೋಟಿ ರೂಗಳ ಅನುದಾನ ಪ್ರಕಟಿಸಿದ್ದು ಸ್ಥಳದ ಬಗ್ಗೆ ನಿರ್ಧರಿಸಲಾಗುತ್ತಿದೆ ಎಂದು ತಿಳಿಸಿದರು. 

ಯಕ್ಷಗಾನ ಕಲೆಯಲ್ಲಿ ತೆಂಕು, ಬಡಗು ಎನ್ನುವ ಭೇದಭಾವಕ್ಕೆ ಅವಕಾಶವಿಲ್ಲ. ಕಲೆಯನ್ನು ಸಮಗ್ರ ದೃಷ್ಟಿಯಲ್ಲಿ ನೋಡಲಾಗುತ್ತದೆ. ಹೆಚ್ಚು ಕಲಾ ಚಟುವಟಿಕೆಗಳನ್ನು ನಡೆಸುವ ಮೂಲಕ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನ ಕಲೆಗೆ ಕ್ರಿಸ್ತಶಕ 13ನೇ ಶತಮಾನದ ದಾಖಲೆ ಇದೆ. ಆಯಾ ಪ್ರದೇಶದ  ಕಲಾವಿದರ ದಾಖಲೀಕರಣ ಆಗಬೇಕು. ಇಂಥ ಕಲೆಯ ವಿಶ್ವಕೋಶ ರಚನೆ ಮಹತ್ವದ ಕಾರ್ಯವಾಗಿದೆ ಎಂದರು.

300x250 AD

ಹಿರಿಯ ಕಲಾವಿದ ಜಿ.ಎಂ. ಭಟ್ಟ ಕೆವಿ ಅವರು ಯಕ್ಷಗಾನ ಮೃದಂಗ ಕಲಾವಿದ ದಿವಂಗತ ವೆಂಕಟರಮಣ ರಾಮಚಂದ್ರ ಹೆಗಡೆ ಕಂಚಿಕೈ ಸಂಸ್ಮರಣೆ ನುಡಿಗಳನಾಡಿದರು. ಯಕ್ಷರಂಗ ಸಂಪಾದಕ ಗೋಪಾಲಕೃಷ್ಣ ಭಾಗವತ ಮತ್ತು ಯಕ್ಷಗಾನ ಅಕಾಡೆಮಿ  ಸದಸ್ಯ ನಿರ್ಮಲಾ ಹೆಗಡೆ ಅತಿಥಿಗಳಾಗಿ ಉಪಸ್ಥಿತರಿದ್ದು ಸಾಂದರ್ಭಿಕ ಮಾತನಾಡಿದರು.

ಕಲಾವಿದ ದಿವಂಗತ ವೆಂಕಟರಮಣ ಹೆಗಡೆ ಅವರ ಪತ್ನಿ ಕಮಲಾ ಹೆಗಡೆಯವರನ್ನು ಗೌರವಿಸಲಾಯಿತು. ವಸುಂಧರಾ ಸಮೂಹ ಸೇವಾ ಸಂಸ್ಥೆ ಅಧ್ಯಕ್ಷ ಆರ್ ಟಿ ಭಟ್ಟ ಕಬಗಾಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಎನ್. ಹೆಗಡೆ ನಿರೂಪಿಸಿದರು. ಪ್ರಭಾಕರ ಹೆಗಡೆ ಮತ್ತು ಗಜಾನನ ಹೆಗಡೆ ಸಹಕರಿಸಿದರು.ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಸತೀಶ ಹೆಗಡೆ ವಂದಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರು ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ಸಾಧರಪಡಿಸಿದರು.

Share This
300x250 AD
300x250 AD
300x250 AD
Back to top