ದಾಂಡೇಲಿ: ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕತಿಕ ಒಕ್ಕೂಟ, ಕ್ರೀಡಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ಸೌಟ್ ಮತ್ತು ಗೈಡ್ ವಿಭಾಗಗಳ ಸಮಾರೋಪ ಸಮಾರಂಭ ಬಹುಮಾನ ವಿತರಣೆ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಅತ್ಯಂತ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ. ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಸುಳ್ಳುಗಳು ವಿಜೃಂಭಿಸುತ್ತಿರುವ, ವೈಭಕರೀಸುತ್ತಿರುವ ಸಂದರ್ಭದಲ್ಲಿ ಮಾತುಗಳು ಮೌನವಾಗುತ್ತವೆ. ಮಾತುಗಳು ತಮ್ಮಶಕ್ತಿಯನ್ನು ಕಳೆದುಕೊಂಡ ಕಾಲಘಟ್ಟದಲ್ಲಿ ನಾವೆಲ್ಲ ಇದ್ದೇವೆ ಎಂದು ನುಡಿದರು.
ನಂತರ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪ್ರಸಿದ್ಧ ಗಾಯಕರಾದ ಡಾ.ಜಯದೇವಿ ಜಂಗಮಶೆಟ್ಟಿ ಅವರು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ, ನಗರಸಭೆ ಮಾಜಿ ಅಧ್ಯಕ್ಷೆ ಯಾಸಿನ್ ಕಿತ್ತೂರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್, ಎಂ. ಕಾಚಾಪುರ, ಬಶೀರ್ ಅಹ್ಮದ್ ಗಿರಿಯಾಳ ಕಾಲೇಜಿನ ಸಾಂಸ್ಕಂತಿಕ ಒಕ್ಕೂಟದ ಕಾರ್ಯಾಧ್ಯಕ್ಷರಾದ ಡಾ.ವಿನಯ್ ಜಿ ನಾಯಕ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಹಾಗೂ ಎನ್ಸಿಸಿ ಅಧಿಕಾರಿ ಡಾ. ನಾಸಿರ್ ಅಹ್ಮದ್ ಜಂಗುಬಾಯಿ, ಎನ್., ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ ಚಲವಾದಿ, ಸೌಟ್ಸ್ ಮತ್ತು ಗೈಡ್ಸ್ನ ಅಧಿಕಾರಿಗಳಾದ ಡಾ.ಬಿ.ಎನ್. ಅಕ್ಕಿ ಹಾಗೂ ತಸ್ಲಿಮಾ ಜೋರು ಇದ್ದರು, ವಿದ್ಯಾರ್ಥಿಗಳಾದ ಅಕ್ಷತಾ ರಾವ್ ಸ್ವಾಗತಿಸಿದರು. ರಮ್ಯಾ ಸೂರ್ಯವಂಶಿ, ಪ್ರಿಯಾಂಕಾ ಪಾತ್ರೋಟ ಅತಿಥಿಗಳನ್ನು ಪರಿಚಯಿಸಿದರು.ನಿಕಿತಾ ಜಾಧವ್ ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್.ಸಿ.ಸಿ.ಬಂಗಾರದ ಪದಕ ವಿಜೇತೆ ಮೇಘಾ ಕದಂರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳ ಬರಹ ಪುಸ್ತಕದ ಬಿಡುಗಡೆ, ಸರ್ಟಿಫಿಕೇಟ್ ಕೋರ್ಸ್ಗಳ ಪ್ರಮಾಣ ಪತ್ರ ವಿತರಣೆ ನಡೆಯಿತು. ಪಿ. ಭಾರ್ಗವಿ, ಸುಶ್ಮಿತಾ ಎಸ್, ಕೊಂಡು ಬೋರೆ, ಜ್ಯೋತಿಬಾ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಅಜಯ್ ರಾಯ್ಕರ್ ವಂದಿಸಿದರು. ಸುಷಿತಾ ಭಾರ್ಗವಿ ರಾಜಶ್ರೀ ಮಾಯಾಕರ್, ರುಕ್ಸಾನಾ ನದಾಫ್ ಕಾರ್ಯಕ್ರಮ ನಿರೂಪಿಸಿದರು.