ಯಲ್ಲಾಪುರ: ಜೀವನದ ಪ್ರತಿ ಹೆಜ್ಜೆಗಳಲ್ಲೂ ವಿಜ್ಞಾನದ ಆವಿಷ್ಕಾರಗಳು ಹಾಸು ಹೊಕ್ಕಾಗಿವೆ ಎಂದು ಬಿಇಒ ಎನ್.ಆರ್.ಹೆಗಡೆ ಹೇಳಿದರು.
ಅವರು ಪಟ್ಟಣದ ಹೊಲಿ ರೋಜರಿ ಪ್ರೌಢಶಾಲೆಯಲ್ಲಿ ಕರಾವಿಪ ಬೆಂಗಳೂರು ಇವರು ಆಯೋಜಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫಾ.ರೇಮಂಡ್ ಫರ್ನಾಂಡೀಸ್ ಅಧ್ಯಕ್ಷ ತೆ ವಹಿಸಿದ್ದರು. ಕರಾವಿಪ ಜಿಲ್ಲಾ ಸಂಚಾಲಕ ಎಂ.ರಾಜಶೇಖರ, ಡಿಡಿಪಿಐ ಕಚೇರಿಯ ಕುಮಾರ ಭಟ್ಟ, ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್, ಬಿ.ಆರ್.ಪಿ ಸಂತೋಷ ಜಿಗಳೂರು, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಜೇಯ ನಾಯಕ ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ 38 ತಂಡಗಳು ಭಾಗವಹಿಸಿದ್ದವು. ಭರತನಹಳ್ಳಿಯ ಸಂದೀಪ ದೇವಾಡಿಗ,ಬಿ.ವೈ.ನಂದನ ಪ್ರಥಮ, ಶಿರಸಿಯ ಗೋಳಿಯ ಅನನ್ಯ ಹೆಗಡೆ,ಚೈತನ್ಯ ಹೆಗಡೆ ದ್ವಿತೀಯ ಸ್ಥಾನ ಪಡೆದರು. ನಿರ್ಣಾಯಕರಾಗಿ ಶಿಕ್ಷಕರಾದ ಅಜೇಯ ನಾಯಕ, ಸದಾನಂದ ದಬಗಾರ, ನಿತೀಶ ತೊರ್ಕೆ,ವೀರೇಂದ್ರ ಗೌಡ ಕಾರ್ಯನಿರ್ವಹಿಸಿದರು.