Slide
Slide
Slide
previous arrow
next arrow

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನ ಗೌರವಿಸುತ್ತಿರುವುದು ರಾಷ್ಟ್ರದಲ್ಲೇ ವಿನೂತನ ಕಾರ್ಯಕ್ರಮ: ಜಿ.ಎಂ. ಶೆಟ್ಟಿ

300x250 AD

 ಅಂಕೋಲಾ: ಬೆಳಗಾರರ ಸಮಿತಿ ಅಂಕೋಲಾದವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ  ಅಂಕೋಲಾದ ಎಲ್ಲಾ ಸ್ವಾತಂತ್ರ್ಯ ಯೋಧರ  ಊರುಗಳಿಗೆ ಭೇಟಿ ನೀಡಿ ಸ್ವಾತಂತ್ರ್ಯ ಯೋಧರ ಕುಟುಂಬದವರನ್ನು ಗೌರವಿಸುವ ಅಭಿಯಾನ ಪ್ರಾರಂಭ ಮಾಡಿದೆ. ಇತ್ತೀಚಿಗೆ ಹಿಲ್ಲೂರು ಗ್ರಾಮಕ್ಕೆ ತೆರಳಿ ರಾಮಚಂದ್ರ ಹಮ್ಮಣ್ಣ ನಾಯಕ , ಸುಲಪ್ಪ ಹರಿಕಂತ್ರ , ಥಾಕು ನಾಯ್ಕ , ಕೃಷ್ಣ ನಾಯಕ ,  ರಾಕು ಹಮ್ಮಣ್ಣ ನಾಯಕ , ವೆಂಕಣ್ಣ ರಾಮಾ ನಾಯಕ ಮತ್ತು ಮಂಜು ಗೌಡ ರವರ ಕುಟುಂಬ ವರ್ಗದವರನ್ನು ಸಭೆಯಲ್ಲಿ ಇದ್ದ ಅತಿಥಿಗಳು ಸನ್ಮಾನಿಸಿದರು .

ಬೆಳಗಾರ ಸಮಿತಿಯ ಈ ಕೆಲಸವನ್ನು ಕೊಂಡಾಡಿದ ಹಿರಿಯ ಮುತ್ಸದ್ಧಿ ಜಿ. ಎಂ. ಶೆಟ್ಟಿ ಇಡೀ ರಾಷ್ಟ್ರದಲ್ಲಿ  ಎಲ್ಲೂ ಆಗದ ಮಹತ್ಕಾರ್ಯವನ್ನು ಬೆಳೆಗಾರರರ ಸಮಿತಿ ಮಾಡುತ್ತಿದೆ ಎಂದರು. ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಅವರ ಕುಟುಂಬದವರು ಸಹ ತ್ಯಾಗ ಗೈದಿದ್ದು  ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ.ಆ ದಿಶೆಯಲ್ಲಿ ಅವರ ಕುಟುಂಬ ವರ್ಗದವರನ್ನು ಕರೆದು ಸನ್ಮಾನಿಸುವುದು ಯೋಗ್ಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಸುಂಕೇರಿ ಹಿಲ್ಲೂರಿನಲ್ಲಿರುವ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಮನೆಯ ಅಂಗಳದಲ್ಲಿ ಧ್ವಜ ಸ್ಥಂಬ ಸ್ಥಾಪಿಸಿ ಮುಂದಿನ ಸ್ವಾತಂತ್ರ್ಯೋತ್ಸವದ ಒಳಗೆ ಧ್ವಜಾರೋಹಣ ಮಾಡಲಾಗುವುದು ಎಂದರು. ಸಮಾರಂಭದ ಸ್ವಾಗತವನ್ನು ರಮೇಶ (ಬುಡ್ಡಿ) ನಾಯಕ  ಮಾಡಿದರು. ವೇದಿಕೆಯ ಮೇಲೆ ಬೊಮ್ಮಯ್ಯ ನಾಯಕ ಹಿಲ್ಲೂರು,ಬೆಳಗಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ದೇವರಾಯ ನಾಯಕ , ಭಾಸ್ಕರ   ನಾರ್ವೇಕರ್ , ರಾಮಚಂದ್ರ ಹೆಗಡೆ , ಲಕ್ಷ್ಮೀ ವೆಂಕಣ್ಣ ನಾಯಕ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶ್ರೀ ಗೋಪು ಆಡ್ಲೂರ್ , ಎನ್.ಕೆ. ನಾಯಕ ವಂದಿಗೆ , ಮಂಜು ಅಡ್ಲೂರ್ , ಮಧುಕರ ಆರ್ ನಾಯಕ ,   ಬಾಲಚಂದ್ರ ಶೆಟ್ಟಿ , ರಾಮಾ ನಾಯಕ ಹುಲಿದೇವರವಾಡಾ , ಸುಬ್ರಹ್ಮಣ್ಯ ನಾಯಕ ಕುಂಟಕಣಿ, ಶಂಕರ ಗೌಡ , ಬೊಮ್ಮಯ್ಯ ( ಸಿಣ್ಣ)  ಗಾಂವ್ಕರ್ , ಜಯರಾಮ ನಾಯಕ ಸೂರ್ವೆ , ಸಂಜು ಗುನಗಾ ಸೂರ್ವೆ ,  ಗೋಪಾಲ ನಾಯಕ , ಪ್ರಕಾಶ ನಾಯಕ ,  ಬಿಂದೇಶ ನಾಯಕ , ಪ್ರವೀಣ ನಾಯಕ ,  ವಿನಾಯಕ ಮೊಗಟ , ಮಾಲಿನಿ ನಾಯಕ , ಶಶಿಕಲಾ ಶಿಂದೆ , ತಾರಾ ಬರ್ಗಿ , ಶ್ರೀಪಾದ (ಗುರು) ನಾಯಕ , ಅಜಿತ ನಾಯಕ , ಗಿರಿಯಪ್ಪ ನಾಯ್ಕ  ಮುಂತಾದವರು ಉಪಸ್ಥಿತರಿದ್ದರು. ಹಿಲ್ಲೂರಿನ ರಸ್ತೆಗಳಿಗೆ ತಮ್ಮ ಗ್ರಾಮದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡುವುದಾಗಿ ಗ್ರಾ.ಪಂ ಅಧ್ಯಕ್ಷ ಬಾಬು ಸುಂಕೇರಿ ಆಶ್ವಾಸನೆ ನೀಡಿದರು. ಕಾರ್ಯಕ್ರಮ ನಿರ್ವಹಣೆಯನ್ನು  ರಾಮಚಂದ್ರ ಹೆಗಡೆ ಮತ್ತು ವಂದನಾರ್ಪಣೆಯನ್ನು ಬಾಲಚಂದ್ರ ಶೆಟ್ಟಿ ಮಾಡಿದರು.

300x250 AD

Attachments

Share This
300x250 AD
300x250 AD
300x250 AD
Back to top