Slide
Slide
Slide
previous arrow
next arrow

ಭತ್ತಕ್ಕೆ ಕೊಳವೆ ಹುಳು ಬಾಧೆ; ನಿಯಂತ್ರಣಕ್ಕೆ ಸಲಹೆ

300x250 AD

ಹೊನ್ನಾವರ: ತಾಲೂಕಿನ ಎಲ್ಲ ಭಾಗಗಳಲ್ಲಿ ಭತ್ತದ ಕೊಳವೆ (ಸುರುಳಿ ಹುಳ) ಹುಳುಬಾಧೆ ಕಾಣಿಸಿಕೊಂಡಿದೆ. ಸಸಿ ಮಡಿಗಳಿಂದ ಶುರುವಾಗಿ ನಾಟಿ ಮಾಡಿದ ಗದ್ದೆಗಳಲ್ಲಿ 45 ರಿಂದ 50 ದಿನಗಳವರೆಗೆ (ಆಗಸ್ಟನಿಂದ ಅಕ್ಟೋಬರ್‌ವರೆಗೆ) ಇವುಗಳ ಬಾಧೆ ಹೆಚ್ಚಾಗಿರುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಹುಳುಬಾಧೆ ಕಂಡು ಬಂದ ಹೊಲಗಳಲ್ಲಿ ರೈತರು, ಎರಡರಿಂದ ನಾಲ್ಕು ಸೆಂಟಿಮೀಟರ್‌ಗಳವರೆಗೆ ನೀರು ನಿಲ್ಲಿಸಬೇಕು. ಇಬ್ಬರು ಹಗ್ಗದ ಎರಡು ತುದಿಗಳನ್ನು ಹಿಡಿದು ಗದ್ದೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಗಿಡಗಳ ಮೇಲೆ ಬಡಿಯುತ್ತಾ ಸಾಗಬೇಕು. ಹುಳುಗಳು ನೀರಿರುವ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದ್ದರಿಂದ ಸ್ವಲ್ಪಕಾಲ ಗದ್ದೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೂಕ್ತ. ಅಂತೆಯೇ ಕ್ಲೋರೋಫೈರಿಫಾಸ್ ಎರಡು ಎಂ.ಎಲ್ ಅನ್ನು ಪ್ರತಿ ಲೀಟರ್ ನೀರಿಗೆ ಸೇರಿಸಬೇಕು. ಎಕರೆಗೆ ೨೦೦ ಲೀಟರ್ ಸಿಂಪರಣಾ ದ್ರಾವಣ ತಯಾರಿಸಿ ಸಂಜೆ ನಾಲ್ಕರಿಂದ ಆರು ಗಂಟೆಯೊಳಗೆ ಗಿಡ ಹಾಗೂ ಬುಡ ತೋಯುವಂತೆ ಸಿಂಪಡಿಸಬೇಕು. ಕ್ಲೋರೋಫೈರಿಫಾಸ್ ರಾಸಾಯನಿಕವು ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ.

300x250 AD

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 8277933037, 8277933041 ಗೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top