ಯಲ್ಲಾಪುರ: ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ- ಆಫ್ ಸೊಸೈಟಿಯಿಂದ ಪಟ್ಟಣದ ರಾಘವೇಂದ್ರ ಬುದ್ಧಿಮಾಂದ್ಯ ಮಕ್ಕಳ ಮತ್ತು ಹಿರಿಯ ನಾಗರಿಕರ ವಸತಿನಿಲಯಕ್ಕೆ ತೆರಳಿ ಸೊಲ್ಲಾಪುರ್ ಚಾದರ ವಿತರಿಸಿದರು.
ಚಾದರ್ ವಿತರಿಸಿ ಮಾತನಾಡಿದ ಪಟ್ಟಣದ ಹಿರಿಯ ನಾಗರಿಕ ಪದ್ಮಾನಾಭ ಶಾನಭಾಗ್, ಹಿಂದಿನಿಂದಲೂ ಸೇಂಟ್ ಮಿಲಾಗ್ರಿಸ್ ಸೊಸೈಟಿ ಸಮಾಜಮುಖಿ ಕಾರ್ಯಗಳನ್ನ ಮಾಡಿಕೊಂಡು ಬಂದಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ಸಂಸ್ಥೆಯು ಅಭಿವೃದ್ಧಿ ಹೊಂದುವುದರ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಶಾಖೆಯ ಚೇರ್‌ಮನ್ ದಾಸಿಂತ್ ಫರ್ನಾಂಡಿಸ್, ಸಹಕಾರಿಯು ರಾಜ್ಯಾದ್ಯಂತ 111 ಶಾಖೆಗಳನ್ನು ಹೊಂದಿದೆ. ಪ್ರತಿವರ್ಷದಂತೆ ಈ ವರ್ಷವೂ ರಾಜ್ಯದ ವಿವಿದೆಡೆ ಸಹಕಾರಿಯ ಕಾರ್ಯವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಅಂಗವಿಕಲ ಮಕ್ಕಳಿಗೆ ಸೊಲ್ಲಾಪುರ್ ಚಾದರ್ ವಿತರಿಸಲಾಗಿದೆ ಎಂದರು.
ಈ ವೇಳೆ ವಸತಿ ನಿಲಯದ ಪ್ರಮುಖರಾದ ಚಂದ್ರು, ಸೈಂಟ್ ಮಿಲಾಗ್ರಿಸ್ ಶಾಖಾ ವ್ಯವಸ್ಥಾಪಕ ಅಭಿಷೇಕ ತಡಸದವರ, ಸಿಬ್ಬಂದಿ ವಿಠ್ಠಲರಾವ್ ಕಾಮತ್ ಮತ್ತು ಇತರರು ಇದ್ದರು.