ಶಿರಸಿ: ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ತಾಲೂಕಿನ ಕೆ.ಎಚ್.ಬಿ. ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಂದಿನಿ ಸುವಾಸನೆ ಭರಿತ ಮ್ಯಾಂಗೋ ಲಸ್ಸಿಯನ್ನುಅಗಸ್ಟ್.15 ಸೋಮವಾರದಂದು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡ ಎಲ್ಲಾ ನಿರ್ದೇಶಕರ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಂದಿನಿಯ ಸುವಾಸನೆ ಭರಿತ ಲಸ್ಸಿಯನ್ನು ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ವಿತರಿಸಲಾಗುತ್ತಿದ್ದು, ಶಿರಸಿ ತಾಲೂಕಿನಲ್ಲಿ ವಿಶೇಷವಾಗಿ ಕೆ.ಎಚ್.ಬಿ. ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಂದಿನಿಯ ಸುವಾಸನೆ ಭರಿತ ಮ್ಯಾಂಗೋ ಲಸ್ಸಿಯನ್ನು ನೀಡಲು ಆರಿಸಿಕೊಳ್ಳಲಾಗಿದೆ ಎಂದರು. ಕೆ.ಎಂ.ಎಫ್. ಒಂದುಸಹಕಾರಸಂಸ್ಥೆಯಾಗಿದ್ದು, ರೈತರ ಹಿತ ಕಾಪಾಡುವಲ್ಲಿ ಶ್ರಮವಹಿಸುತ್ತಿದ್ದು, ರೈತರಿಂದ ನೇರವಾಗಿ ಹಾಲು ಸಂಘಗಳ ಮೂಲಕ ಹಾಲನ್ನು ಖರೀದಿಸಿ ಒಕ್ಕೂಟದಿಂದ ಹಾಲನ್ನು ಮಾರಾಟ ಮಾಡಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡಲಾಗುವ ಪಾರದರ್ಶಕ ವ್ಯವಸ್ಥೆ ನಮ್ಮದಾಗಿದ್ದು, ಸರಕಾರದಿಂದ ಸಿಗುವ ಅನೇಕ ಸೌಲಭ್ಯ ಮತ್ತು ಅನುದಾನಗಳನ್ನು ನಮ್ಮ ಒಕ್ಕೂಟದಿಂದ ಪ್ರತೀ ಹಾಲು ಉತ್ಪಾದಕನಿಗೆ ತಲುಪುವಂತೆ ಮಾಡಲಾಗುತ್ತಿದೆ ಎಂದರು. ದೇಶದ ರೈತರನ್ನು ಹಾಗೂ ಸೈನಿಕರನ್ನು ಪ್ರತೀಕ್ಷಣವು ನೆನಪು ಮಾಡಿಕೊಳ್ಳಬೇಕು ಹಾಗೂ ಅವರುಗಳ ನಿಸ್ವಾರ್ಥ ಮನೋಭಾವನೆಯ ಸೇವೆಯ ಮಹತ್ವವನ್ನು ಅರಿತು ನಾವು ಅವರುಗಳ ತ್ಯಾಗ ಹಾಗೂ ಪರಿಶ್ರಮಕ್ಕೆ ನಾವೆಲ್ಲರೂ ಯಾವಾಗಲೂ ಚಿರರುಣಿಯಾಗಿರಬೇಕು ಎಂದರು. ಮಾರುಕಟ್ಟೆಯಲ್ಲಿ ಅನೇಕ ರೀತಿ ಹಾಲಿನ ಬ್ರ‍್ಯಾಂಡ್ಗಳಿದ್ದು ಅವೆಲ್ಲಕ್ಕಿಂತ ನಂದಿನಿಯು ಲಕ್ಷಾಂತರ ಗ್ರಾಹಕರ ವಿಶ್ವಾಸಾರ್ಹ ಮೆಚ್ಚುಗೆಯ ಬ್ರ‍್ಯಾಂಡ್ ಆಗಿದ್ದು, ತಾವೆಲ್ಲರೂ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸಬೇಕು ಹಾಗೂ ತಮ್ಮ ಮನೆಗಳಲ್ಲಿ ನಂದಿನಿ ಉತ್ಪನ್ನಗಳನ್ನು ಉಪಯೋಗಿಸವುಂತೆ ನಿಮ್ಮ ಪಾಲಕರಿಗೆ ಹೇಳಬೇಕು ಎಂದು ಮಕ್ಕಳಿಗೆ ಈ ಮೂಲಕ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾಮಕ್ಕಳು “ಜೈಜವಾನ್ ಜೈಕಿಸಾನ್” ಘೋಷಣೆಯನ್ನು ಕೂಗಿದರು.
ಕೆ.ಎಚ್.ಬಿ. ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ದಾಕ್ಷಾಯಿಣಿ ಹೆಗಡೆ, ಸುನಯನ ಹೆಗಡೆ, ಶಿಕ್ಷಕರಾದ ಜಿ.ಎಚ್.ನಾಯ್ಕ, ಎಸ್.ಡಿ.ಎಂ.ಸಿ ಸದಸ್ಯರು, ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ ಎಸ್ ಶೀತಲ ಕೇಂದ್ರದ ವ್ಯವಸ್ಥಾಪಕರಾದ ಕೃಷ್ಣಕೆ ಎನ್, ಮಾರುಕಟ್ಟೆ ಅಧಿಕಾರಿಯಾದ ಅಜ್ಜಪ್ಪ, ವಿಸ್ತರಣಾಧಿಕಾರಿಯಾದ ವಿನಾಯಕ ಬೇವಿನಕಟ್ಟಿ, ಶಿರಸಿ ಉಪವಿಭಾಗದ ಗುರುದರ್ಶನ್ ಭಟ್, ದಯಾನಂದ ಎಂಬರ‍್ಕರ್, ಅಭಿಷೇಕ ನಾಯ್ಕ, ಜಯಂತ ಪಟಗಾರ, ಪ್ರವೀಣ ಬಳ್ಳಾರಿ ಹಾಗೂ ಮಕ್ಕಳ ಪಾಲಕರುಗಳು ಉಪಸ್ಥಿತರಿದ್ದರು.