ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಬಕ್ಕಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.12 ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅನೇಕ ಚಟುವಟಿಕೆಗಳ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮೊದಲೇ ಆಯೋಜಿಸಿದ್ದ ‘ಆಝಾದಿ ಕಾ ಅಮೃತ ಮಹೋತ್ಸವ್’ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯ ವಿಜೇತರಿಗೆೆ ಬಹುಮಾನಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ರಮಾ ಪಟವರ್ಧನರು ಮಕ್ಕಳಿಗೆ ಸ್ವಾತಂತ್ರಕ್ಕಾಗಿ ಹೋರಾಡಿದ ಕನ್ನಡ ನಾಡಿನ ಮಹಾಪುರುಷರ, ವಿಶೇಷವಾಗಿ ರಾಣಿಯರ ಬಗ್ಗೆ ತಿಳಿಸಿ ನಾವು ಏಕೆ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ವಿವರಿಸಿದರು.
ಲ.ಪ್ರತಿಭಾ ಹೆಗಡೆಯವರು ಲಯನ್ಸ ಸೇವಾ ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಲ.ಜ್ಯೋತಿ ಅಶ್ವತ್ಥ ಹೆಗಡೆಯವರು ಕತೆಯ ಮೂಲಕ, ಅಕ್ಷರಗಳಿಂದ ಚಿತ್ರಗಳನ್ನು ಬಿಡಿಸುವುದನ್ನು ಹೇಳಿಕೊಟ್ಟರು ಮತ್ತು ಲ.ಶರಾವತಿ ಭಟ್ ಗಣಿತವನ್ನು ಸುಲಭವಾಗಿ ಮಾಡುವುದನ್ನು ತಿಳಿಸಿಕೊಟ್ಟರು. ಲ.ಸುಮಂಗಲಾ ಹೆಗಡೆ ಮಕ್ಕಳಿಗೆ ಆಟವನ್ನು ಆಡಿಸಿದರು. ಶಾಲೆಯ ಮುಖ್ಯಾಧ್ಯಾಪಕಿಯಾದ ಶ್ರೀಮತಿ ಲಲಿತಾ ಭಟ್ಟ ಮತ್ತು ಶಿಕ್ಷಕವೃಂದದವರು ಉತ್ಸಾಹದಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.