Slide
Slide
Slide
previous arrow
next arrow

ವಿದ್ಯುತ್ ರಂಗದ ಖಾಸಗೀಕರಣದ ವಿಧೇಯಕ ಮಂಡನೆ: ಸಿಪಿಐ (ಎಂ) ಖಂಡನೆ

300x250 AD

ಕಾರವಾರ: ಕೇಂದ್ರ ಸರಕಾರವು ಪಾರ್ಲಿಮೆಂಟಿನಲ್ಲಿ ವಿದ್ಯುತ್ ರಂಗದ ಖಾಸಗೀಕರಣದ ವಿಧೇಯಕ ಮಂಡನೆ ಮಾಡಿರುವುದನ್ನು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದ್ಯುತ್ ರಂಗದ ಖಾಸಗೀಕರಣದ ವಿಧೇಯಕವನ್ನು ಪಾರ್ಲಿಮೆಂಟ್‌ನಲ್ಲಿ ಪಾಸ್ ಮಾಡುವ ಮುಂಚೆ ದೇಶದ 550 ರೈತ ಸಂಘಟನೆಗಳ ಜಗತ್ತಿನ ಅತಿದೊಡ್ಡ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ಜೊತೆ ಚರ್ಚಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಅಂತಹ ಯಾವುದೇ ಚರ್ಚೆ ನಡೆಸದೇ ವಿಧೇಯಕವನ್ನು ಮಂಡಿಸಿರುವುದು ದೇಶದ ಅನ್ನದಾತರ ಕುರಿತ ಅವರ ಅಸಡ್ಡೆ ಮನೋಭಾವವನ್ನು ತೋರುತ್ತದೆ. ಅದಾನಿ ಹಾಗೂ ಅಂಬಾನಿಯಂತಹ ಲೂಟಿಕೋರ ಕಾರ್ಪೊರೇಟ್ ಕುಳಗಳಿಗೆ ಸಾರ್ವಜನಿಕ ರಂಗದ ವಿದ್ಯುತ್ ರಂಗವನ್ನು ದಾನವಾಗಿ ನೀಡುವ ಆತುರದಿಂದ ಮಂಡಿಸಿ, ತನಗಿರುವ ಬಹುಮತವನ್ನು ಬಳಸಿ ಬಲವಂತವಾಗಿ ದೇಶದ ಮೇಲೆ ಹೇರಲು ಹೊರಟಿರುವ ಬಿಜೆಪಿ ಸರಕಾರದ ಕ್ರಮವನ್ನ ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಕೂಡಲೇ ವಿಧೇಯಕವನ್ನು ವಾಪಾಸು ಪಡೆಯುವಂತೆ ಬಲವಾಗಿ ಒತ್ತಾಯಿಸುತ್ತದೆ.
ಈ ವಿಧೇಯಕವು ಜಾರಿಗೆ ಬಂದರೆ ಸಣ್ಣ ಕೈಗಾರಿಕೆಗಳು ಮತ್ತು ರೈತರು ಹಾಗೂ ಸಾಮಾನ್ಯರ ಪರವಾಗಿ ಸರಕಾರದ ನೀಡುವ ಸಾರ್ವಜನಿಕ ಸಹಾಯಧನವು ಈ ಕಾರ್ಪೊರೇಟ್ ಕುಳಗಳ ಪಾಲಾಗಲಿದೆ. ನಂತರ ರೈತರು ತಮ್ಮ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪಡೆಯುವ ಪೂರ್ವವೇ ಮೊಬೈಲ್ ಪ್ರೀಪೇಡ್ ಕರೆನ್ಸಿ ಮಾದರಿಯಲ್ಲಿ ಮುಂಗಡವಾಗಿ ಹಣ ನೀಡಿ ಪಡೆಯ ಬೇಕಾಗುತ್ತದೆ. ಇದು ರೈತರು ಹಾಗೂ ಕೃಷಿ ಕೂಲಿಕಾರರ ಆಧಾರಿತ ಬೇಸಾಯದ ಮರಣ ಶಾಸನವಾಗಲಿದೆ ಹಾಗೂ ಕಂಪನಿಗಳ ಬೇಸಾಯಕ್ಕೆ ದಾರಿ ತೆರೆಯಲಿದೆ. ವಿಧೇಯಕವನ್ನು ವಾಪಾಸು ಪಡೆಯುವಂತೆ ವಿದ್ಯುತ್ ರಂಗದ ನೌಕರರು ನಡೆಸುವ ಮುಷ್ಕರವನ್ನು ಸಿಪಿಐ(ಎಂ) ಬೆಂಬಲಿಸುತ್ತದೆ ಮತ್ತು ಹೋರಾಟದಲ್ಲಿ ಭಾಗವಹಿಸಲು ಇಂದು ಕಾರವಾರದಲ್ಲಿ ಸೇರಿದ ಜಿಲ್ಲಾ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ನಿರ್ಣಯವನ್ನು ಜಿಲ್ಲಾ ಸಮಿತಿ ಕಾಯ್ದರ್ಶಿ ಯಮುನಾ ಗಾಂವಕರ ಮಂಡಿಸಿದರು.
ಅಂಚೆ ನೌಕರರ ಹೋರಾಟಕ್ಕೆ ಬೆಂಬಲ: ಅಂಚೆ ಇಲಾಖೆಯ ಖಾಸಗೀಕರಣದ ವಿರುದ್ಧ ಅಂಚೆ ಸಿಬ್ಬಂದಿಗಳು ನಡೆಸುತ್ತಿರುವ ಹೋರಾಟಕ್ಕೆ ಸಿಪಿಐ (ಎಂ) ಬೆಂಬಲಿಸುತ್ತದೆ. ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ.ಎಸ್.ಮೀನಾಕ್ಷಿ ಸುಂದರo ಹಾಜರಿದ್ದು ಮಾರ್ಗದರ್ಶನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಂತಾರಾಮ ನಾಯಕ ವಹಿಸಿದ್ದರು. ಜಿಲ್ಲಾ ಸಮಿತಿಯ ತಿಲಕ ಗೌಡ, ನಾಗಪ್ಪ ನಾಯ್ಕ, ಭೀಮಣ್ಣ ಭೋವಿ ಮುಂತಾದವರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top