ಶಿರಸಿ: ತಾಲೂಕಾ ಭಂಡಾರಿ ಸಮಾಜ ಅಭಿವೃದ್ಧಿ ಸಂಘದಿಂದ ಆ.7 ರಂದು ಶ್ರಾವಣ ಮಾಸದ ನಿಮಿತ್ತ ಶ್ರೀ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ನಡೆದ 29 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆಯು ವೈದಿಕರಾದ ಶ್ರೀಕಾಂತ ಭಟ್ಟರ ಪೌರೋಹಿತ್ಯದಲ್ಲಿ ಅಕ್ಷಯ ಮತ್ತು ಶ್ರೀಮತಿ ಅನೂಷಾ ಹನ್ಮಂತೀಕರ ಯಜಮಾನತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಹಿಳಾ ಮಂಡಳಿಯವರಿಂದ ಅರಿಶಿಣ ಕುಂಕುಮ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷರಾದ ನಾಗರಾಜ ನಾಯಕ ಮಾತನಾಡುತ್ತಾ ಪ್ರತಿ ವರ್ಷದಂತೆ ಶ್ರಾವಣ ಮಾಸದ ನಿಮಿತ್ತ 193 ಕಳಸದೊಂದಿಗೆ ಶ್ರೀ ದೇವರ ಪೂಜೆಯು ವಿಜೃಂಭಣೆಯಿಂದ ನಡೆಯಲು ಸಮಾಜ ಬಾಂಧವರ ಸಹಕಾರ ಮುಖ್ಯ ಕಾರಣ. ಪೂಜಾ ವಿಧಿ ವಿಧಾನದ ವೆಚ್ಚ ಮತ್ತು ಅನ್ನ ಸಂತರ್ಪಣೆಯ ವೆಚ್ಚವನ್ನು ಸಮಾಜ ಬಾಂಧವರೇ ವಹಿಸಿಕೊಂಡಿದ್ದು, ಎಲ್ಲರಿಗೂ ಕೃತಜ್ಞತೆಯನ್ನು ಅಧ್ಯಕ್ಷರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಜಗದೀಶ ದೇಶಭಂಡಾರಿ, ಪಾಂಡುರಂಗ ಕೆರೇಕರ್, ಚಂದ್ರಕಾಂತ ನಾಯ್ಕ, ಗಜಾನನ ದೇಶಭಂಡಾರಿ, ಚಿದಾನಂದ ದಿವಗಿ, ಪ್ರಕಾಶ ದಿವಗಿ, ಅಶೋಕ ಹನ್ಮಂತೀಕರ, ಪ್ರಕಾಶ ದೇಶಭಂಡಾರಿ, ಜಗನ್ನಾಥ ದೇಶಭಂಡಾರಿ, ಶ್ರೀ ಕೃಷ್ಣಾ ಜನ್ನಾ ಭಂಡಾರಿ, ಲತಾ ಭಂಡಾರಕರ, ಸುನೀತಾ ನಾಯಕ, ಪ್ರಮೀಳಾ ಕೇರೆಕರ್ ಹಾಜರಿದ್ದರು.