ಶಿರಸಿ: ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ, ಕಂದಾಯ ಇಲಾಖೆಯ ಹಾಗೂ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯ ಆದೇಶಗಳನ್ನು ಪಾಲಿಸಿ ಜಾತಿ ಪ್ರಮಾಣ ಪತ್ರ ವಿತರಿಸಬೇಕಾಗಿರುತ್ತದೆ.ಆದ ಕಾರಣ ಸರ್ಕಾರದ ಹಾಗೂ ನ್ಯಾಯಾಲಯಗಳ ಆದೇಶಗಳನ್ನು ಪಾಲಿಸಿ ಪರಿಶೀಲಿಸಿ ಜಾತಿ ಪ್ರಮಾಣ ನೀಡಬೇಕೆಂದು ಶಿರಸಿಯ ಜಂಗಮ ಸಮಾಜವು ಸರ್ಕಾರಕ್ಕೆ ಆಗ್ರಹಿಸಿ ಶಿರಸಿಯ ತಹಶೀಲ್ದಾರ ಕಾರ್ಯಾಲಯದಲ್ಲಿ ಮನವಿ ನೀಡಿದೆ. ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತೃತ್ವ ವಹಿಸಿರುವಂತಹ ನ್ಯಾಯವಾದಿ ಬಿ. ಡಿ. ಹಿರೇಮಠ ಅವರು ಬೇಡ ಜಂಗಮ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿರುವ ಬೇಡ ಜಂಗಮ ಸಮಾಜದವರಿಗೆ ಈ ಹಿಂದಿನಿಂದಲೂ ಬೇಡ ಜಂಗಮ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸುತ್ತಾ ಬರಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಿವದೇವ ದೇಸಾಯ ಸ್ವಾಮಿ ಹಳಿಯಾಳ, ಬಸವರಾಜ ಒಶಿಮಠ ಮುಂಡಗೋಡ, ಲಿಂಗರಾಜ ಹಿರೇಮಠ, ಶಾಂತವೀರ ಕಲ್ಮಟ್, ಪರಮೇಶ್ವರ ಕಾನಳ್ಳಿಮಠ, ಶಿವಾನಂದ ದೂಪದಮಠ, ಕಾಡಯ್ಯ ಸ್ಥಾವರಮಠ, ಜಿ.ಎಸ್. ಹಿರೇಮಠಶಿರಸಿ, ವಾಗಿಶ್ಹಿರೇಮಠ, ಸಂದೀಪ ಚರಂತಿಮಠ, ರವೀಂದ್ರಹಿರೇಮಠ, ಬಿ.ಜಿ. ಹಿರೇಮಠ, ಚರಣ ಹಿರೇಮಠ, ರತ್ನಮಾಲಾ ಹಿರೇಮಠ ಮುಂತಾದ ಬೇಡ ಜಂಗಮ ಸಮಾಜದ ಪ್ರಮುಖರು ಭಾಗವಹಿಸಿದ್ದರು